ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳಿಂದಾಗಿ 43 ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ.
Advertisement
ಗೋಕಾಕ್, ಮೂಡಲಗಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ಹುಕ್ಕೇರಿ ತಾಲೂಕಿನ ಗ್ರಾಮಗಳಲ್ಲಿ ಜನರು ನರಕಯಾತನೆ ಅನುಭವಿಸ್ತಿದ್ದಾರೆ.
ಮನೆಯಲ್ಲಿ ಇರೋಕೂ ಆಗದೇ, ಊರು ಬಿಡೋಕೂ ಆಗದೇ ಅತಂತ್ರ ಪರಿಸ್ಥಿತಿಯಲ್ಲಿ ಹಲವು ಕುಟುಂಬಗಳು ಸಿಲುಕಿವೆ.
ಇನ್ನು ಈವರೆಗೆ 2,106 ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಬೆಳಗಾವಿ ಮಾತ್ರವಲ್ಲ, ಬಾಗಲಕೋಟೆಯಲ್ಲೂ ನಾನಾ ಅವಾಂತರವೇ ಆಗೋಗಿದೆ. ಘಟಪ್ರಭಾ ನದಿಯ ಅಬ್ಬರದಿಂದ ಮಿರ್ಜಿ ಗ್ರಾಮದಲ್ಲಿನ 70 ಮನೆಗಳು ಸಂಪೂರ್ಣ ಮುಳುಗಡೆಯಾಗಿವೆ.