ವಿಜಯನಗರದಲ್ಲಿ ಭಾರೀ ಮಳೆ: ಹಳ್ಳದಲ್ಲಿ ಕೊಚ್ಚಿ ಹೋದ ಮಿನಿಲಾರಿ!

0
Spread the love

ವಿಜಯನಗರ:- ಜಿಲ್ಲೆಯಾದ್ಯಾಂತ ಸುರಿದ ಭಾರಿ ಮಳೆಗೆ ಹಳ್ಳದಲ್ಲಿ ಮಿನಿಲಾರಿ ಕೊಚ್ಚಿ ಹೋಗಿದೆ. ಅದೃಷ್ಟವಶಾತ್ ಅನಾಹುತವೊಂದು ತಪ್ಪಿದ್ದು, ಕಾರ್ಮಿಕರು ಸೇಫ್ ಆಗಿದ್ದಾರೆ.

Advertisement

ಘಟನೆಯಿಂದ ಜನಜೀವನ ಅಸ್ತವ್ತಸ್ತವಾಗಿದೆ. ಕೂಲಿಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಮಿನಿ ಗೂಡ್ಸ್ ಲಾರಿಯು ಪಿಚಾರಹಟ್ಟಿ ಹೊರಹೊಲಯದ ಹಳ್ಳ ದಾಟುವ ಸಂದರ್ಭದಲ್ಲಿ ಹಳ್ಳಕ್ಕೆ ಬಿದ್ದಿದೆ. ಚಾಲಕ ತನ್ನ ಸಮಯ ಪ್ರಜ್ಞೆ ಯಿಂದ ಗಾಡಿಯಲ್ಲಿ ಇದ್ದ ಹತ್ತಕ್ಕೂ ಹೆಚ್ಚು ಜನರನ್ನು ಕೆಳಗಡೆ ಇಳಿಸಿದ್ದಾನೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಜನ ಪಾರಾಗಿದ್ದಾರೆ.

ಕಾನಾಹೊಸಹಳ್ಳಿ ಯಲ್ಲಿನ ಗುಜರಿ ಅಂಗಡಿಗೆ ನೀರು ನುಗ್ಗಿದ ಪರಿಣಾಮ ಗುಜರಿ ಕಬ್ಬಿಣದ ಚೀಲಗಳು ಬಸ್ ನಿಲ್ದಾಣಕ್ಕೆ ಬಂದಿವೆ. ರಾಷ್ಟ್ರೀಯ ಹೆದ್ದಾರಿ 50 ರ ದಲಿತ ಕಾಲೋನಿ ಯ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಬಂದ್ ಆಗಿದೆ. ಸಿದ್ದಾಪುರದ ದೊಡ್ಡಹಳ್ಳ, ಹುಡೇಂ, ತಾಯಕನಹಳ್ಳಿ ಯ, ಚಿನ್ನಹಗರಿ ತುಂಬಿ ಹರಿಯುತ್ತಿದೆ. ಹಾಗೂ ಹುಲಿಕೆರೆ, ಕಾನಾಹೊಸಹಳ್ಳಿ ಕೆರೆಗಳಿಗೆ ಅರ್ಧದಷ್ಟು ನೀರು ಬಂದಿವೆ.

ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ರೈತರು ಬೆಳೆದ ಮಕ್ಕೇಜೋಳ, ಹಾಗೂ ಸಜ್ಜೆ, ಸೂರ್ಯಕಾಂತಿ ಬೆಳೆಗಳಿಗೆ ಹಾನಿಯಾಗಿದೆ.


Spread the love

LEAVE A REPLY

Please enter your comment!
Please enter your name here