ಭಾರೀ ಮಳೆ ಹಿನ್ನೆಲೆ; ಹಳ್ಳದಲ್ಲಿ ಕೊಚ್ಚಿ ಹೋದ ಆರೋಗ್ಯ ಇಲಾಖೆ ಸಿಬ್ಬಂದಿ, ಇಬ್ಬರು ಪಾರು!

0
Spread the love

ಗದಗ: ಗದಗ ಜಿಲ್ಲೆಯ ಹಲವಡೆ ಭಾರಿ ಮಳೆಯ ಪರಿಣಾಮವಾಗಿ ತುಂಬಿ ಹರಿದ ಹಳ್ಳದಲ್ಲಿ ಮೂವರು ಆರೋಗ್ಯ ಇಲಾಖೆ ಸಿಬ್ಬಂದಿ ಕೊಚ್ಚಿ ಹೋದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ-ಯಾ ಸಾ ಹಡಗಲಿ ಗ್ರಾಮದ ಮಧ್ಯ ನಡೆದಿದೆ.

Advertisement

ಭಾರಿ ಮಳೆಯಿಂದ ಉಕ್ಕಿ ಹರಿದ ಮಿಸೇನ್ ಕೇರಿಯ ತುಂಬಿದ ಹಳ್ಳದಲ್ಲಿ ಸಿಬ್ಬಂದಿಗಳು ಬೈಕ್ ನಲ್ಲಿ ದಾಟುವಾಗ ಈ ಘಟನೆ ಸಂಭವಿಸಿದೆ. ಇಬ್ಬರು ಸಿಬ್ಬಂದಿ ಬಚಾಬ್ ಆಗಿದ್ದು, ಓರ್ವ ಮಹಿಳಾ ಸಿಬ್ಬಂದಿ ನೀರುಪಾಲಾಗಿದ್ದಾರೆ. ಬಸಮ್ಮ ಹಳ್ಳದಲ್ಲಿ ಕೊಚ್ವಿ ಹೋದ ಮಹಿಳಾ ಸಿಬ್ಬಂದಿಯಾಗಿದ್ದು, ಬಸವರಾಜ್ ಕಡಪಟ್ಟಿ, ವೀರಸಂಗಯ್ಯ ಹಿರೇಮಠ ಬಚಾವ್ ಆಗಿ ಬಂದ ಸಿಬ್ಬಂದಿಗಳಾಗಿದ್ದಾರೆ.

ಹಡಗಲಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಮುಗಿಸಿ ವಾಪಸ್ ಬೆಳವಣಕಿ ಗ್ರಾಮಕ್ಕೆ ಬರುವಾಗ ಘಟನೆ ನಡೆದಿದ್ದು, ಜಾಲಿಗಿಡದಲ್ಲಿ ಸಿಲುಕಿ ಇಬ್ಬರು ಸಿಬ್ಬಂದಿ ಬಚಾವ್ ಆಗಿದ್ದು, ಬಸಮ್ಮನಿಗಾಗಿ ಗ್ರಾಮಸ್ಥರು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಬದುಕಿ ಬಂದ ಇಬ್ಬರು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

LEAVE A REPLY

Please enter your comment!
Please enter your name here