ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ಹೆಬ್ಬಾಳ ನೂತನ ಮೇಲ್ಸೇತುವೆಯನ್ನು ಲೋಕಾರ್ಪಣೆ ಮಾಡಿದರು. K.R.ಪುರಂನಿಂದ ಮೇಖ್ರಿ ಸರ್ಕಲ್ ಕಡೆ ಸಂಪರ್ಕಿಸುವ 700 ಮೀಟರ್ ಉದ್ದದ ಹೊಸ ಮೇಲ್ಸೇತುವೆಯನ್ನು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ವೇಳೆ ಸಚಿವರಾದ ಭೈರತಿ ಸುರೇಶ್, ಕೃಷ್ಣಭೈರೇಗೌಡ, ಶಾಸಕರಾದ ಎಸ್.ಆರ್.ವಿಶ್ವನಾಥ್, ಹ್ಯಾರಿಸ್, ನಟಿ ರಮ್ಯಾ ಉಪಸ್ಥಿತರಿದ್ದರು.
ರಾಜಧಾನಿ ಟ್ರಾಫಿಕ್ ಅಂದ್ರೆ ಬಹುತೇಕರಿಂದ ಹೆಬ್ಬಾಳ ಜಾಮ್, ಜಾಮ್ ನೆನಪಾಗುತ್ತೆ. ಇದೀಗ ದೊಡ್ಡ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬಿದ್ದಿದೆ. ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಇಂದು ಉದ್ಘಾಟನೆಗೊಂಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೆಬ್ಬಾಳ ಫ್ಲೈಓವರ್ಗೆ ಹಸಿರು ನಿಶಾನೆ ತೋರಿದ್ದಾರೆ.
ಈ ಮೇಲ್ಸೇತುವೆ 500 ಮೀಟರ್ ಉದ್ದವಿದ್ದು, ಕೆ.ಆರ್. ಪುರಂ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ಹೋಗಲು ಈ ಮೇಲ್ಸೇತುವೆ ವಾಹನ ಸವಾರರ ಓಡಾಟಕ್ಕೆ ಸಹಕಾರಿಯಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಈ ಫ್ಲೈ ಓವರ್ ನಿರ್ಮಿಸಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 31 ತಿಂಗಳಾಗಿದೆ. ಮೇಲ್ಸೇತುವೆ ನಿರ್ಮಾಣಕ್ಕೆ 94 ಕೋಟಿಗಳ ವೆಚ್ಚವಾಗಿದೆ ಎಂದು ವರದಿ ಆಗಿದೆ