ಡೆಹ್ರಾಡೂನ್:- ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಪತನವಾಗಿದ್ದು, ಕೇದಾರನಾಥದಲ್ಲಿ ಭಾರೀ ಅನಾಹುತ ತಪ್ಪಿದೆ. ಋಷಿಕೇಶ ಏಮ್ಸ್‌ನಿಂದ ತುರ್ತು ವೈದ್ಯಕೀಯ ಸೇವೆಯ ಅಡಿ ರೋಗಿಯನ್ನು ಕರೆದೊಯ್ಯಲು ಕೇದಾರನಾಥಕ್ಕೆ ಹೆಲಿಕಾಪ್ಟರ್ ಬಂದಿತ್ತು.
Advertisement
ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್‌ಗೆ ಇಳಿಸಲಾಗುತ್ತಿತ್ತು, ಆದ್ರೆ ಹೆಲಿಪ್ಯಾಡ್‌ಗೆ ಇನ್ನೂ 20 ಮೀಟರ್ ದೂರದಲ್ಲಿರುವಾಗಲೇ ಹಿಂಭಾಗ ಮುರಿದು ಹೆಲಿಕಾಪ್ಟರ್ ಪತನಗೊಂಡಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಏರ್ ಆಂಬುಲೆನ್ಸ್‌ನಲ್ಲಿದ್ದ ಇಬ್ಬರು ವೈದ್ಯರು ನತ್ತು ಪೈಲಟ್ ಸುರಕ್ಷಿತವಾಗಿದ್ದಾರೆ. ಮೇಲ್ನೋಟಕ್ಕೆ ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿರುವುದಾಗಿ ಹೇಳಲಾಗುತ್ತಿದೆ.