ಬಾಲಿವುಡ್ ನಟಿ ಹಾಗೂ ಮಾಡೆಲ್ ಶೆಫಾಲಿ ಜರಿವಾಲಾ ಕೇವಲ 42ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ನಟಿಯ ಸಾವು ಯಾವುದರಿಂದ ಆಗಿದೆ ಎಂಬುದು ಇದುವರೆಗೂ ಧೃಡವಾಗಿಲ್ಲ. ಇದೀಗ ನಟಿಯ ಆಪ್ತ ಸ್ನೇಹಿತೆ ಪೂಜಾ ಘಾಯ್ ಅವರು ಶೆಫಾಲಿ ಸಾವಿಗೂ ಮೊದಲು ಏನಾಗಿತ್ತು ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆ ದಿನ ಏನಾಯಿತು ಎಂಬುದನ್ನು ಶೆಫಾಲಿ ಪತಿ ಪರಾಗ್ ತ್ಯಾಗಿ ಅವರು ಪೂಜಾ ಬಳಿ ಹೇಳಿದ್ದರು ಎಂಬುದನ್ನು ಪೂಜಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ಶೆಫಾಲಿಗೆ ಏನಾಗಿತ್ತು ಎಂಬುದು ಮರಣೋತ್ತರ ಪರೀಕ್ಷೆ ಬಳಿಕವೇ ಗೊತ್ತಾಗಬೇಕಿದೆ. ಆದರೆ, ಪರಾಗ್ ಹಾಗೂ ಅವರ ಕುಟುಂಬದಿಂದ ಕೆಲವು ವಿಚಾರ ತಿಳಿದಿದೆ. ಅಂದು ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇತ್ತು. ಮನೆಯನ್ನು ಬೆಳಕಿನಿಂದ ಅಲಂಕರಿಸಲಾಗಿತ್ತು. ಅವರನ್ನು ಆಸ್ಪತ್ರೆಗೆ ತರುವಾಗ ಮನೆ ಹಾಗೆಯೇ ಅಲಂಕಾರಗೊಂಡಿತ್ತು. ಸಾಯುವ ಮೊದಲು ಶೆಫಾಲಿ ಸಾಮಾನ್ಯ ಊಟವನ್ನೇ ಮಾಡಿದ್ದರು. ಪರಾಗ್ ಬಳಿ ನಾಯಿಯನ್ನು ವಾಕ್ ಕರೆದುಕೊಂಡು ಹೊಗುವಂತೆ ಅವಳು ಕೇಳಿದಳು. ಅವನು ಕೆಳಗೆ ಹೋಗುತ್ತಿದ್ದಂತೆ ಶೆಫಾಲಿ ಅಸ್ವಸ್ಥಳಾದಳು’ ಎಂದು ಪೂಜಾ ತಿಳಿಸಿದ್ದಾರೆ.
‘ಮನೆ ಕೆಲಸದವರು ಪರಾಗ್ ಬಳಿ ಈ ವಿಚಾರ ಹೇಳಿದರು. ಆ ಕೂಡಲೇ ಪರಾಗ್ ಮೇಲೆ ಬಂದ. ಆಗ ಶೆಫಾಲಿಗೆ ಜೀವ ಇತ್ತು. ನಾಡಿ ಮಿಡಿಯುತ್ತಿತ್ತು. ಆದರೆ, ಕಣ್ಣುಗಳು ಓಪನ್ ಆಗುತ್ತಿರಲಿಲ್ಲ. ದೇಹ ಭಾರ ಎನಿಸುತ್ತಿತ್ತು. ಆ ಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವಾಗ ಅವಳು ಮೃತಪಟ್ಟಿದ್ದಳು’ ಎಂದು ಪೂಜಾ ಸಂದರ್ಶನದಲ್ಲಿ ವಿವರಿಸಿದ್ದಾರೆ.
‘ಶೆಫಾಲಿ ಸಾಯುವ ದಿನವೂ ಡ್ರಿಪ್ಸ್ ಹಾಕಿಕೊಂಡಿದ್ದು ನಿಜ. ಇದು ಸುರಕ್ಷಿತವಲ್ಲ. ಆದರೆ, ದುಬೈನಲ್ಲಿ ಇದು ಕಾಮನ್’ ಎಂದು ಪೂಜಾ ಹೇಳಿದ್ದಾರೆ. ಸದ್ಯ ಶೆಫಾಲಿ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿಯಲ್ಲಿ ಏನಿದೆ ಎಂಬ ವಿಚಾರ ಇನ್ನೂ ರಿವೀಲ್ ಆಗಿಲ್ಲ. ಶೀಘ್ರವೇ ನಟಿಯ ಸಾವಿನ ಮಾಹಿತಿ ಹೊರ ಬೀಳಲಿದೆ.