ಚಳಿಗಾಲದ ಋತು ಪ್ರಾರಂಭವಾಗುತ್ತಿದ್ದಂತೆ, ಅನೇಕ ಆರೋಗ್ಯ ಸಮಸ್ಯೆಗಳು ಹರಡಲು ಪ್ರಾರಂಭವಾಗುತ್ತದೆ. ಜ್ವರ, ನೆಗಡಿ ಮತ್ತು ಕೆಮ್ಮಿನಂತಹ ಸೋಂಕುಗಳು ಮಕ್ಕಳು ಮತ್ತು ವಯಸ್ಕರಲ್ಲಿ ವೇಗವಾಗಿ ಹರಡುತ್ತದೆ. ಇದಕ್ಕೆ ಪ್ರಮುಖ ಕಾರಣ ಶೀತ ಋತುವಿನಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದು.
Advertisement
ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಂಡರೆ, ಅದು ವೇಗವಾಗಿ ಕಡಿಮೆಯಾಗುವುದಿಲ್ಲ. ಇದಕ್ಕಾಗಿ ಚಿಂತೆ ಮಾಡದೆ ಕೆಲವೊಂದು ಮನೆಮದ್ದುಗಳನ್ನು ಪ್ರಯೋಗಿಸಿದರೆ ಅದರಿಂದ ಶೀತ, ನೆಗಡಿ ಹಾಗೂ ಕೆಮ್ಮು ನಿವಾರಣೆ ಆಗುವುದು.
ಮನೆಮದ್ದುಗಳು
- ಕಫ ಕರಗಿಸಿ, ಕೆಮ್ಮು ಕಡಿಮೆ ಮಾಡುವಲ್ಲಿ ಹಸಿ ಶುಂಠಿಯ ರಸ ಪರಿಣಾಮಕಾರಿ. ವರ್ಷ ಮೇಲಿನ ಮಕ್ಕಳಿಗಾದರೆ ಇದನ್ನು ನೀಡಬಹುದು. ಒಂದೆರಡು ಹನಿಯಷ್ಟು ನಿಂಬೆ ರಸ, ಅಷ್ಟೇ ಪ್ರಮಾಣದ ಶುಂಠಿ ರಸವನ್ನು ನಾಲ್ಕಾರು ಹನಿ ಜೇನುತಪ್ಪದೊಂದಿಗೆ ಮಿಶ್ರ ಮಾಡಿ, ಮಗುವಿನ ನಾಲಿಗೆಗೆ ಆಗಾಗ ಸ್ವಲ್ಪವೇ ನೆಕ್ಕಿಸುವುದರಿಂದ ಕೆಮ್ಮು ನಿಯಂತ್ರಿಸಲು ಸಹಾಯವಾಗುತ್ತದೆ.
- ಕೊಂಚ ದೊಡ್ಡ ಮಕ್ಕಳಿಗಾದರೆ, ಸೋಂಪನ್ನು ಹುರಿದು ತರಿಯಾಗಿ ಪುಡಿ ಮಾಡಿ. ಅದನ್ನು ಆಗೀಗ ಕಾಲು ಚಮಚದಷ್ಟು ಮಕ್ಕಳಿಗೆ ಅಗಿಯುವುದಕ್ಕೆ ನೀಡಿ. ಇದರಿಂದಲೂ ಕೆಮ್ಮು ನಿಯಂತ್ರಣಕ್ಕೆ ಬರಬಹುದು.
- ಕೊಬ್ಬರಿ ಎಣ್ಣೆಯನ್ನು ಉಗುರು ಬಿಸಿ ಮಾಡಿ, ಅದರಲ್ಲಿ ಒಂದೆರಡು ಕರ್ಪೂರವನ್ನು ಕರಗಿಸಿ. ಈ ತೈಲವನ್ನು ಮಕ್ಕಳ ಎದೆ ಮತ್ತು ಬೆನ್ನಿನ ಭಾಗಕ್ಕೆ ತೆಳುವಾಗಿ ಹಚ್ಚಿ, ಲಘುವಾಗಿ ಮಸಾಜ್ ಮಾಡಿ. ಬಿಸಿ ನೀರಲ್ಲಿ ಅದ್ದಿ ತೆಗೆದು ಹಿಂಡಿದ ಬಟ್ಟೆಯಿಂದ, ಈ ಭಾಗಗಳಿಗೆ ಶಾಖ ಕೊಡಿ