ಇನ್ವೆಸ್ಟ್‌ ಕರ್ನಾಟಕದಲ್ಲಿ ಪ್ರಕಟಿಸಿದ 21 ಪ್ರಮುಖ ಹೂಡಿಕೆಗಳ ಪಟ್ಟಿ ಇಲ್ಲಿದೆ!

0
Spread the love

ಬೆಂಗಳೂರು:-ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 11ರಿಂದ ನಾಲ್ಕು ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ 2025 ನಡೆಯುತ್ತಿದೆ. ಮೊದಲ ದಿನವೇ ಉದ್ಘಾಟನೆ ಬಳಿಕ ಪ್ರಮುಖ ಚರ್ಚೆಗಳು ನಡೆದು, ವಿದೇಶಿ ಕಂಪನಿಗಳು ರಾಜ್ಯದಲ್ಲಿ ಹೂಡಿಕೆಯ ಆಸಕ್ತಿ ಪ್ರಕಟಿಸಿವೆ. ಈ ಸಂಬಂಧ ಕರ್ನಾಟಕದೊಂದಿಗೆ ಒಪ್ಪಂದಕ್ಕೆ ಒಪ್ಪಿ, ಪ್ರಮುಖ ಹೂಡಿಕೆಗಳನ್ನು ಘೋಷಿಸಿವೆ.

Advertisement

ಮಂಗಳವಾರ ನಡೆದ ಇನ್ವೆಸ್ಟ್‌ ಕರ್ನಾಟಕ 2025- ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರಕಟಿಸಲಾಗಿರುವ 20 ಪ್ರಮುಖ ಹೂಡಿಕೆ ಯೋಜನೆಗಳ ವಿವರ ಹೀಗಿದೆ.

1. ಜೆಎಸ್‌ಡಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್ – ಸೌರ ಯೋಜನೆ , ಗಾಳಿ ಶಕ್ತಿ  ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹಣೆ, ಬ್ಲೇಡ್ ತಯಾರಿಕೆ ಮತ್ತು ವಿಂಡ್ ಟರ್ಬೈನ್ ಜನರೇಟರ್ ಸ್ಥಾವರ ಸ್ಥಾಪನೆಗೆ ₹ 56,000 ಕೋಟಿ   ಹೂಡಿಕೆ.

2. ಬಲ್ಡೋಟಾ ಸ್ಟೀಲ್ ಆ್ಯಂಡ್‌  ಪವರ್ ಲಿಮಿಟೆಡ್ – ಸಮಗ್ರ ಉಕ್ಕು  ತಯಾರಿಕಾ ಸ್ಥಾವರಕ್ಕೆ ರೂ ₹ 54,000 ಕೋಟಿ   ಹೂಡಿಕೆ.

3. ಟಾಟಾ ಪವರ್ ರಿನ್ಯೂವೇಬಲ್‌ ಎನರ್ಜಿ ಲಿಮಿಟೆಡ್ – ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳು ಮತ್ತು ಮೇಲ್ಚಾವಣಿ ವಿದ್ಯುತ್‌ ಪರಿಹಾರಗಳ ಅಭಿವೃದ್ಧಿಗೆ ₹ 50,000 ಕೋಟಿ   ಹೂಡಿಕೆ.

4. ರೆನ್ಯೂ ಪ್ರೈವೇಟ್‌ ಲಿಮಿಟೆಡ್ – 4ಗಿಗಾವಾಟ್‌ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು  ₹ 50,000 ಕೋಟಿ   ಹೂಡಿಕೆ.

5. ಸೆರೆಂಟಿಕಾ ರಿನ್ಯೂವೇಬಲ್ಸ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿಗಾಗಿ ₹43,975 ಕೋಟಿ   ಹೂಡಿಕೆ.

6. ಜೆಎಸ್‌ಡಬ್ಲ್ಯು ಗ್ರೂಪ್ – ಜೆಎಸ್‌ಡಬ್ಲ್ಯು ಸಿಮೆಂಟ್ ಆ್ಯಂಡ್‌ ಸ್ಟೀಲ್ ಮತ್ತು ಅದರ ಅಂಗಸಂಸ್ಥೆಗಳಿಗೆ ₹ 43,900 ಕೋಟಿ   ಹೂಡಿಕೆ.

7. ಮಹೀಂದ್ರಾ ಸಸ್ಟೆನ್ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು ₹ 35,000 ಕೋಟಿ ಹೂಡಿಕೆ.

8. ಹೀರೋ ಫ್ಯೂಚರ್ ಎನರ್ಜಿಸ್ – ನವೀಕರಿಸಬಹುದಾದ ಇಂಧನ, ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳ ಯೋಜನೆಗಳಿಗೆ ₹ 22,200 ಕೋಟಿ ಹೂಡಿಕೆ.

9. ಸುಜ್ಲಾನ್ ಎನರ್ಜಿ ಲಿಮಿಟೆಡ್ – ಪವನ ವಿದ್ಯುತ್ ಯೋಜನೆಗಳಿಗೆ ₹ 21,950 ಕೋಟಿ ಹೂಡಿಕೆ.

10. ಎಸ್ಸಾರ್ ರಿನ್ಯೂವೇಬಲ್ಸ್‌ ಲಿಮಿಟೆಡ್‌-  ₹ 20,000 ಕೋಟಿ ಹೂಡಿಕೆ.

11. ಅವಾಡಾ ಎನರ್ಜಿ ಪ್ರೈವೇಟ್ ಲಿಮಿಟೆಡ್ – ₹ 18,000 ಕೋಟಿ ಹೂಡಿಕೆ.

12. ಎಪ್ಸಿಲಾನ್ ಗ್ರೂಪ್ – ಆನೋಡ್ ಮತ್ತು ಕ್ಯಾಥೋಡ್ ಪದಾರ್ಥಗಳ ತಯಾರಿಕೆಗೆ ₹ 15,350 ಕೋಟಿ ಹೂಡಿಕೆ.

13. ಎಂವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ – ಸೋಲಾರ ಫೊಟೊವೊಲ್ಟ್ಯಾಕ್‌ ಸೆಲ್ಸ್‌    ಮತ್ತು ಮಾಡ್ಯೂಲ್‌ಗಳ ತಯಾರಿಕೆಗೆ ₹ 15,000 ಕೋಟಿ ಹೂಡಿಕೆ.

14. ಲ್ಯಾಮ್ ರಿಸರ್ಚ್ – ಸೆಮಿಕಂಡಕ್ಟರ್‌ ಉಪಕರಣಗಳ ತಯಾರಿಕೆಗೆ ₹ 10,000 ಕೋಟಿ ಹೂಡಿಕೆ.

15. ಆಂಪಿನ್‌  ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್ – ₹10,000 ಕೋಟಿ ಹೂಡಿಕೆ.

16. ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಲಿಮಿಟೆಡ್ – ₹ 10,000 ಕೋಟಿ ಹೂಡಿಕೆ.

17. ಔ2 ಪವರ್ ಪ್ರೈವೇಟ್‌ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಸೌರ ಮತ್ತು ಪವನ ಯೋಜನೆಗಳ ಸ್ಥಾಪನೆಗೆ ₹ 10,000 ಕೋಟಿ ಹೂಡಿಕೆ.

18. ಕಾಂಟಿನುಮ್‌ ಗ್ರೀನ್ ಎನರ್ಜಿ ಜಿಪಿ –   ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಲು ₹ 10,000 ಕೋಟಿ  ಹೂಡಿಕೆ.

19. ಸೋಟೆಫಿನ್ ಭಾರತ್ – ಸಂಪೂರ್ಣ ಸ್ವಯಂಚಾಲಿತ ರೊಬೊಟಿಕ್ ಬಹುಮಹಡಿ ಕಾರ್ ಮತ್ತು ಬಸ್ ಪಾರ್ಕಿಂಗ್ ವ್ಯವಸ್ಥೆಗಳ ನಿರ್ಮಾಣ ಮತ್ತು ಸ್ಥಾಪನೆಗೆ ₹    8,500 ಕೋಟಿ ಹೂಡಿಕೆ.

20. ಶ್ರೀ ಸಿಮೆಂಟ್ ಲಿಮಿಟೆಡ್ – ಇಂಟೆಗ್ರೇಟೆಡ್‌  ಸ್ಥಾವರ ಮತ್ತು ಕ್ಲಿಂಕರ್ ಗ್ರೈಂಡಿಂಗ್ ಘಟಕಕ್ಕೆ ₹ 8,350 ಕೋಟಿ ಹೂಡಿಕೆ.

21. ಹೆಕ್ಸಾ ಕ್ಲೈಮೇಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ – ₹ 8,000 ಕೋಟಿ ಹೂಡಿಕೆ.


Spread the love

LEAVE A REPLY

Please enter your comment!
Please enter your name here