ಬೆಂಗಳೂರು: ಸರ್ಕಾರದಲ್ಲಿ ಹಣ ಇಲ್ಲ, ಇರುವ ಹಣ ಗ್ಯಾರಂಟಿಗಳಿಗೆ ಕೊಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದರ ಏರಿಕೆ ಮುಂದುವರಿಸಿದ್ದಾರೆ. ಹಾಲಿನ ದರ, ವಿದ್ಯುತ್ ದರ, ನೋಂದಣಿ ಶುಲ್ಕ ಹೆಚ್ಚಳ ಮಾಡಿದ್ದಾರೆ.
ಸರ್ಕಾರದಲ್ಲಿ ಹಣ ಇಲ್ಲ, ಇರುವ ಹಣ ಗ್ಯಾರಂಟಿಗಳಿಗೆ ಕೊಡುತ್ತಿದ್ದಾರೆ. ರಾಜ್ಯ ಆರ್ಥಿಕ ಕುಸಿತ ಕಾಣುತ್ತಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಸಚಿವರು ಜಿಲ್ಲೆಗಳಿಗೆ ಹೋಗಿ ಸಭೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ನಾಗಪುರ ಆರ್‌ಎಸ್‌ಎಸ್ ಕಚೇರಿಗೆ ಪ್ರಧಾನಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲೇನೂ ಕುತೂಹಲ ಇಲ್ಲ. ಅಲ್ಲಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮೋದಿಯವರು ಹೋಗಿದ್ದಾರೆ. ಅದೂ ಅಲ್ಲದೇ ಯುಗಾದಿ ಬೇರೆ ಇದೆ. ಆರ್‌ಎಸ್‌ಎಸ್‌ಗೆ ಯುಗಾದಿ ವಿಶೇಷ ಪರ್ವ. ಯುಗಾದಿಯಲ್ಲಿ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಹೋಗಿದ್ದಾರೆ.
ಮೋದಿಯವರು ಮೂಲತಃ ಆರ್‌ಎಸ್‌ಎಸ್‌ನವರು. ಪ್ರಚಾರಕರಾಗಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡ ಅವರು ಇಂದು ದೇಶದ ಪ್ರಧಾನಿ ಆಗಿದ್ದಾರೆ. ಸಂಘದ ಸಾಮಾನ್ಯ ಕಾರ್ಯಕರ್ತರಾಗಿ ಅವರು ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದಾರೆ. ಈ ಭೇಟಿ ನಮಗೆಲ್ಲ ಆನಂದ ತಂದಿದೆ ಎಂದರು.