‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ಇನ್ನೂ ಕೆಲ ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಗಿ ಈ ಭಾರಿ ಯಾರೆಲ್ಲಾ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ ಎಂಬ ಕುತೂಹಲ ಶುರುವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಈ ಮಧ್ಯೆ ಬಿಗ್ ಬಾಸ್ ಸೀಸನ್ 12’ಕ್ಕೆ ಬರ್ತಿರೋ ಸ್ಪರ್ಧಿಗಳ ಪಟ್ಟಿ ಇಂತಿದೆ.
ಈ ಬಾರಿಯೂ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿಬರಲಿದೆ. ಬಿಗ್ ಬಾಸ್ ಕಾರ್ಯಕ್ರಮ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸದ್ಯ ಸುದೀಪ್ ‘ಮಾರ್ಕ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದು ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಮಾರ್ಕ್ ಸಿನಿಮಾದ ಕೆಲಸ ಮೂಗಿಸಲು ನಿರ್ಧರಿಸಿದ್ದಾರೆ.
ಅಂದ ಹಾಗೆ ಈ ಭಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸೀರಿಯಲ್ ನಟ ಸಾಗರ್ ಬಿಲ್ಲಿಗೌಡ, ನಟಿ ಶ್ವೇತಾ ಪ್ರಸಾದ್, ಸಂಜನಾ ಬುರ್ಲಿ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ವಿವಾದಗಳ ಮೂಲಕ ಸುದ್ದಿ ಆದ ಸುದ್ದಿ ನಿರೂಪಕಿ ದಿವ್ಯಾ ವಸಂತ್ ಕೂಡ ಬರ್ತರೇ ಎಂಬ ಸುದ್ದಿ ಹರಿದಾಡುತ್ತಿದೆ.
ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದ ಸಮೀರ್ ಎಂಡಿ ಹೆಸರು ಕೇಳಿ ಬಂದಿದೆ. ಡಾಕ್ಟರ್ ಬ್ರೋ ಅಂತನೇ ಫೇಮಸ್ ಆದ ಗಗನ್ ಶ್ರೀನಿವಾಸ್ ಕೂಡ ಬರುತ್ತಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಸೀರಿಯಲ್ ಮೂಲಕ ಖ್ಯಾತಿ ಘಳಿಸಿ ಸದ್ಯ ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಮೇಘಾ ಶೆಟ್ಟಿ ಹೆಸರು ಕೂಡ ಈ ಭಾರಿ ಬಿಗ್ ಬಾಸ್ ಮನೆಯಲ್ಲಿ ಕೇಳಿಬರಲಿದೆ. ಸಂಖ್ಯಾಶಾಸ್ತ್ರಜ್ಞ ಅರವಿಂದ ರತನ್, ಯೂಟ್ಯೂಬ್ ಸೆನ್ಶೇಶನ್ ಪಾಯಲ್ ಚೆಂಗಪ್ಪ ಹೆಸರು ಕೂಡ ಲಿಸ್ಟ್ನಲ್ಲಿ ಇದೆ. ವರುಣ್ ಆರಾಧ್ಯಾ ಕೂಡ ಈ ಬಾರಿ ಬಿಗ್ ಬಾಸ್ಗೆ ಬರ್ತಾರಂತೆ. ‘ಮಹಾನಟಿ’ ಖ್ಯಾತಿಯ ಗಗನಾ ಕೂಡ ಬರಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ನಟ ವಿಜಯ್ ಸೂರ್ಯ, ದೀಪಿಕಾ ಗೌಡ, ಅಮೃತಾ ರಾಮಮೂರ್ತಿ, ಸಿಂಗರ್ ಸುನೀಲ್, ಬಾಳು ಬೆಳಗುಂದಿ, ಧನುಶ್, ಸ್ವಾತಿ ಹೆಸರು ಕೂಡ ಕೇಳಿ ಬರ್ತಿದೆ.