ನಿಮಗೆ ಕಾಡುವ ಹೊಟ್ಟೆ ನೋವಿನ ಸಮಸ್ಯೆಗೆ ಇಲ್ಲಿದೆ ನೋಡಿ ಸೂಪರ್ ಮನೆ ಮದ್ದು!

0
Spread the love

ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಲ್ಲೂ ಈ ಹೊಟ್ಟೆ ನೋವಿನ ಸಮಸ್ಯೆ ಕಂಡು ಬರುತ್ತದೆ. ಕೆಲವರಿಗೆ ಮಲಬದ್ದತೆಯಿಂದ ಹೊಟ್ಟೆ ಕಾಣಿಸಿದ್ರೆ, ಮತ್ತೆ ಕೆಲವರಲ್ಲಿ ಗ್ಯಾಸ್, ಅಲ್ಸರ್ ಕಾರಣದಿಂದ ಹೊಟ್ಟೆ ನೋವು ಕಾಣಿಸಕೊಳ್ಳುತ್ತದೆ. ಇನ್ನು ಸಾಮಾನ್ಯವಾಗಿ ಅಜೀರ್ಣ ಸಮಸ್ಯೆಯಿಂದಲೂ ಈ ತೊಂದರೆ ಉಂಟಾಗಬಹುದು. ಹೀಗೆ ಕಾಣಿಸಿಕೊಳ್ಳುವ ಸಾಮಾನ್ಯ ಹೊಟ್ಟೆ ನೋವುಗಳಿಗೆ ಕೆಲ ನೈಸರ್ಗಿಕ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.

Advertisement

ನಿಂಬೆ ಚಹಾನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಇದರಿಂದಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಚಹಾ ಮಾಡಿಕೊಂಡು ಕುಡಿಯಬೇಕು. ಆ ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸ ನಮ್ಮ ಹೊಟ್ಟೆ ಸೇರಿದಾಗ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.

ಪುದೀನ ಎಲೆತಾಜಾ ಪುದೀನ ಎಲೆಗಳು ಸಹ ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯ ಮನೆಮದ್ದು ಆಗಿದೆ. ಕೆಲವೊಮ್ಮೆ ನಮ್ಮ ಜೀಣಾರ್ಂಗದಲ್ಲಿ ಮಾಂಸ ಖಂಡಗಳ ಭಾಗದಲ್ಲಿ ಗ್ಯಾಸ್ಟ್ರಿಕ್‍ನ ಸಮಸ್ಯೆಯಿಂದ ವಿಪರೀತ ನೋವು ಉಂಟಾಗುತ್ತದೆ. ಜೊತೆಗೆ ಎದೆಯುರಿತದ ತರಹ ಭಾಸವಾಗುತ್ತದೆ. ಇಂತಹ ಸಮಯದಲ್ಲಿ ಪುದೀನ ಎಲೆಗಳನ್ನು ಸೇವಿಸಬೇಕು. ಈ ಪುದಿನ ಎಲೆಗಳಲ್ಲಿ ಆಂಟಿ- ಸ್ಪಸ್ಮೊಡಿಕ್ ಲಕ್ಷಣಗಳು ಹೆಚ್ಚಾಗಿದ್ದು, ಈ ರೀತಿಯ ಸಮಸ್ಯೆಗಳಿಗೆ ಬಹು ಬೇಗನೆ ಮುಕ್ತಿ ಕೊಡುತ್ತೇವೆ. ಪುದೀನ ಎಲೆಗಳಲ್ಲಿರುವ ಗಿಡಮೂಲಿಕೆಗಳು ಮನುಷ್ಯನ ಕರುಳಿನ ಮತ್ತು ಹೊಟ್ಟೆಯ ಏರಿಳಿತಗಳನ್ನು ನಿಯಂತ್ರಣ ಮಾಡುವ ಶಕ್ತಿಯನ್ನು ಹೊಂದಿವೆ.

ಶುಂಠಿ ತಿನ್ನಿಶುಂಠಿಯ ಬೇರುಗಳನ್ನು ಹಾಗೆ ಹಲ್ಲಿನಿಂದ ಬೇಕಾದರೂ ಜಗಿದು ತಿನ್ನಬಹುದು ಅಥವಾ ಶುಂಠಿಯನ್ನು ಸಣ್ಣಗೆ ಚೂರುಗಳನ್ನಾಗಿ ಮಾಡಿಕೊಂಡು ಅದರಿಂದ ಚಹ ತಯಾರಿಸಿಕೊಂಡು ಕುಡಿಯಬಹುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ರೋಗಗಳಿಂದ ಮುಕ್ತಿ ಪಡೆಯಿರಿ. ಜೊತೆಗೆ ಶುಂಠಿ ಹೃದ್ರೋಗವನ್ನು ತಡೆಯುತ್ತದೆ, ಮುಟ್ಟಿನ ನೋವನ್ನು ನಿವಾರಿಸುತ್ತದೆ.

ಜೀರಿಗೆ ಕಷಾಯ: ಜೀರಿಗೆ ಕಷಾಯವು ಜಠರಕ್ಕೆ ಒಳ್ಳೆಯದು. ಇದರ ಜೊತೆಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಜೀರಿಗೆ ಕಷಾಯವನ್ನು ಮಾಡಿ ಕುಡಿಯುವುದು ಉತ್ತಮ ಪರಿಹಾರವಾಗಿದೆ. ಜೀರಿಗೆಯಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇರುವುದರಿಂದ, ಜೀರ್ಣಶಕ್ತಿ ಹೆಚ್ಚಿಸಿ, ನಮ್ಮ ಆರೋಗ್ಯ ಮತ್ತು ದೇಹದ ತೂಕ ಎರಡನ್ನೂ ಸಹ ಇದು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ.

ಇಂಗು: ಅಸ್ತಮಾ ಇದ್ದವರಿಗೆ ಇದು ಒಳ್ಳೆಯ ಮನೆಮದ್ದಾಗಿದೆ. ಅಷ್ಟೇ ಅಲ್ಲದೇ ಹೊಟ್ಟೆ ಉಬ್ಬರ ಸೇರಿದಂತೆ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಗಿನಿಂದ ಮಾಡಿದಂತಹ ಆಯುರ್ವೇದಿಕ್ ಕಷಾಯವು ಹೊಟ್ಟೆಯ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ಸೆಳೆತದಿಂದ ಪರಿಹಾರ ನೀಡುವುದು.

 


Spread the love

LEAVE A REPLY

Please enter your comment!
Please enter your name here