ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಒನಕೆ ಓಬವ್ವ 18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ ಎಂದು ಮುಖ್ಯ ಶಿಕ್ಷಕ ಬಸವರಾಜ ಕುರಿ ಹೇಳಿದರು.
ನರೇಗಲ್ಲನ ಕೆಜಿಎಸ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರಮಾತೆ ಒನಕೆ ಓಬವ್ವ ಮತ್ತು ಮೌಲಾನಾ ಅಬುಲ್ ಕಲಾಂ ಅಜಾದ್ ಜಯಂತಿಯಲ್ಲಿ ಅವರು ಮಾತನಾಡಿದರು.
ಓಬವ್ವ ತ್ರಿಕಾಲಗಳಿಗೂ ಪ್ರಭಾವಿಸುವಂತಹ ವ್ಯಕ್ತಿತ್ವ ಸಂಪಾದಿಸಿದ್ದರಿಂದಲೇ ಸಾಂಸ್ಕೃತಿಕ ನಾಯಕಿ ಎಂಬ ಅಭಿದಾನಕ್ಕೆ ಅರ್ಹಳಾಗಿದ್ದಾಳೆ. ಆಕೆಯ ಸೌಮ್ಯತೆ, ಸೌಜನ್ಯ, ವಿವೇಕ, ವಿವೇಚನೆ, ವಿಚಾರಗಳು ಅಪ್ಯಾಯಮಾನ ಎಂದರು.
ಎನ್.ಎಲ್. ಚೌಹಾನ್, ಎಂ.ಪಿ. ಅಣಗೌಡರ್, ಎಸ್.ಐ. ಜಗಾಪೂರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ರಾಜೇಶ್ವರಿ ತೊಂಡೆಹಾಳ, ಲಕ್ಷ್ಮಿ ಬಂಡಿ ವಡ್ಡರ್, ವಿಜಯಲಕ್ಷ್ಮಿ ಕುಸ್ತಿ ಮತ್ತು ಮಕ್ಕಳು ಹಾಜರಿದ್ದರು.
ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ವೀರಮಾತೆ ಒನಕೆ ಓಬವ್ವ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಎಚ್.ಎಂ. ಸೀತಿಮನಿ, ಎಸ್.ಎ. ಮೆಣಸಗಿ, ಆರೀಫ್ ಮಿರ್ಜಾ, ರಕ್ಷಿತ ಮುತಗಾರ, ಶಂಕ್ರಪ್ಪ ದೊಡ್ಡಣ್ಣವರ, ಮಹಾದೇವ ಮ್ಯಾಗೇರಿ, ಉದಯ ಗುಡಿಮನಿ, ಶೇಖಪ್ಪ ಹೊನವಾಡ, ನೀಲಪ್ಪ ಚಳ್ಳಮರದ, ಎಂ.ಎಚ್. ಕಾತರಕಿ, ಕಾವ್ಯಾ ಅರವಟಗಿಮಠ, ನಿರ್ಮಲಾ ಕಡೆತೋಟದ, ಎ.ಎಸ್. ಬಂಕಾಪೂರ, ಎಸ್.ಎ. ಹೊಸಮನಿ ಇದ್ದರು.


