HomeGadag Newsಹೈಟೆಕ್ ಸ್ವರೂಪ ಸರ್ಕಾರಿ ಶಾಲೆಗಳು

ಹೈಟೆಕ್ ಸ್ವರೂಪ ಸರ್ಕಾರಿ ಶಾಲೆಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುತ್ತಿರುವ ಸಂದರ್ಭದಲ್ಲಿ ಪಾಲಕರು, ವಿದ್ಯಾರ್ಥಿಗಳನ್ನು ಮತ್ತೊಮ್ಮೆ ಸರ್ಕಾರಿ ಶಾಲೆಗಳು ಕೈಬೀಸಿ ಕರೆಯವಂತೆ ಆಕರ್ಷಿಸುತ್ತಿವೆ. ಅಂದಿನ ಶಿಕ್ಷಣ ಮತ್ತು ಇಂದಿನ ಸರ್ಕಾರಿ ಶಾಲೆಗಳಲ್ಲಿನ ಕೊಠಡಿಗಳ ಮತ್ತು ಕೊಠಡಿಗಳ ಗೋಡೆ ಮೇಲೆ ಬಿತ್ತರಿಸಿರುವ ಬಣ್ಣ ಬಣ್ಣದ ಶೈಕ್ಷಣಿಕಕ್ಕೆ ಉತ್ತೇಜಿಸುವ ಚಿತ್ರಗಳು, ಗೊಂಬೆಗಳು, ವಿವಿಧ ಸರ್ಕಾರಿ ಸೌಲಭ್ಯಗಳು ಪಾಲಕರಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎನ್ನುವ ಮನಸ್ಥಿತಿಯನ್ನು ಹುಟ್ಟು ಹಾಕಿಸುತ್ತಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತೀಚೆಗೆ ಸರ್ಕಾರಿ ಶಾಲೆಗಳ ಉಳಿವಿಗೆ ಮಾದರಿ ಕೊಠಡಿಗಳ ನಿರ್ಮಾಣ, ಕಂಪ್ಯೂಟರ್ ಸೇರಿದಂತೆ ಉತ್ತಮ ಅನುಭವ ಹೊಂದಿರುವ ಶಿಕ್ಷಕ ಬಳಗದೊಂದಿಗೆ ಮಕ್ಕಳ ಕಲಿಕಾ ಪ್ರೇರಣೆಗೆ ಮತ್ತು ಅವರ ಬೌದ್ಧಿಕ ಬೆಳೆವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದರೊಂದಿಗೆ ಖಾಸಗಿ ಶಾಲೆಗಳಿಗೆ ಟಕ್ಕರ್ ನೀಡಲು ಮುಂದಾಗುತ್ತಿದೆ.

ಸರ್ಕಾರದಿಂದ ದೊರೆಯುವ ಸಣ್ಣ ಮಟ್ಟದ ಅನುದಾನದಲ್ಲಿ, ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರನ್ನು ಒಳಗೊಂಡು ಗ್ರಾಮಸ್ಥರ ಮತ್ತು ಶಿಕ್ಷಕರೇ ಸ್ವಂತ ಹಣವನ್ನು ವಿನಿಯೋಗ ಮಾಡಿ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಮಾದರಿ ಕೊಠಡಿಗಳನ್ನು ಹಾಗೂ ಶಾಲೆಯಲ್ಲಿರುವ ಸಂಪೂರ್ಣ ಕೊಠಡಿಗಳಿಗೆ ಮತ್ತು ಗೋಡೆಗಳಿಗೆ ಬಣ್ಣ ಬಣ್ಣದ ರಂಗು ನೀಡಿ ಮಕ್ಕಳನ್ನು ಮತ್ತು ಪಾಲಕರನ್ನು ಆಕರ್ಷಿಸಲು ಮುಂದಾಗುತ್ತಿವೆ. ಮಕ್ಕಳ ಶಿಕ್ಷಣಕ್ಕೆ ಪೂರಕ ಪರಿಸರವನ್ನು ನಿರ್ಮಿಸುವುದರೊಂದಿಗೆ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ.

ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಆದ ಬದಲಾವಣೆಗಳಿಂದ ಪಾಲಕರಲ್ಲಿಯೂ ಆಸಕ್ತಿ ಮೂಡಿದ್ದು, ಮಕ್ಕಳು ಸರ್ಕಾರಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಪ್ರಸಕ್ತ ವರ್ಷ ಸರ್ಕಾರಿ ಶಾಲೆಗಳು ಹೆಚ್ಚು ದಾಖಲಾತಿಯನ್ನು ಹೊಂದುವ ಲಕ್ಷಣಗಳು ಗೋಚರಿಸುತ್ತೇವೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಪ್ರಾರಂಭವಾಗಿರುವ ಸರ್ಕಾರಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ) ಶಾಲೆಯ ಅತಿಥಿ ಶಿಕ್ಷಕರಿಗೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸ್ವಂತ ಹಣವನ್ನು ಗೌರವ ಧನವಾಗಿ ನೀಡುತ್ತಿದ್ದಾರೆ. ತಾಲೂಕಾ ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳತ್ತ ಗಮನ ಹರಿಸಿ ಅಭಿವೃದ್ಧಿಗೆ ಸಹಕಾರ ನೀಡುವುದು ಅವಶ್ಯವಾಗಿದೆ. ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಶಾಲೆಗಳ ಪಟ್ಟಿ ಮಾಡಿ ಶಾಸಕರು ಮತ್ತು ಶಿಕ್ಷಣಾಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಕ್ರಮ ಕೈಗೊಳ್ಳಬೇಕಿದೆ. ವಿಶೇಷವಾಗಿ ರೋಣ, ಗಜೇಂದ್ರಗಡ ತಾಲೂಕಿನಲ್ಲಿರುವ ಕೆಲ ಶಾಲೆಯಲ್ಲಿನ ಶಿಕ್ಷಕರು ಉತ್ತಮ ಕಾರ್ಯಗಳನ್ನು ಮಾಡಲ ಉತ್ಸುಕರಾಗಿದ್ದು, ಅಂತಹವರನ್ನು ಪ್ರೇರೇಪಿಸುವ ಕೆಲಸ ನಡೆಯಬೇಕಾಗಿದೆ.

ಗದಗ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳು ಪ್ರಸಕ್ತ ಸಾಲಿನ ಶಾಲಾ ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕರು ಒಳಗೊಂಡಂತೆ ಎಸ್‌ಡಿಎಂಸಿ ಅಧ್ಯಕ್ಷ ಮತ್ತು ಸರ್ವ ಸದ್ಯರು ಹಾಗೂ ಸರ್ಕಾರ ಕೂಡ ಸಾಕಷ್ಟು ಶ್ರಮ ವಹಿಸುತ್ತಿದೆ. ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸಲು ವಿವಿಧ ವಿನೂತನ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ.

– ಆರ್.ಎಸ್. ಬುರಡಿ.

 ಶಾ.ಶಿ ಇಲಾಖೆ ಉಪ ನಿರ್ದೇಶಕರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!