ಬೆಂಗಳೂರು: ಕೋರ್ಟ್ ಆದೇಶ ನಮ್ಮ ಕೈಸೇರುವ ಹೊತ್ತಿಗೆ ಮುಷ್ಕರ ಶುರುವಾಗಿತ್ತು ಎಂದು ಕೆಎಸ್ಆರ್ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬಾರಾವ್ ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು,
ಸಾರಿಗೆ ನೌಕರರು ಕೋರ್ಟ್ ಆದೇಶವನ್ನು ಉಲ್ಲಂಘಿಸಿಲ್ಲ, ಅದೇಶದ ಪ್ರತಿ ನಮ್ಮ ಕೈಸೇರುವಷ್ಟು ಹೊತ್ತಿಗೆ ಮುಷ್ಕರ ಆರಂಭವಾಗಿತ್ತು ಮತ್ತು ಅದು ಸಿಕ್ಕ ಬಳಿಕ ಯಾವ ವಾಹನವನ್ನೂ ತಡೆದಿಲ್ಲ ಎಂದು ಹೇಳಿದರು. ಸಿಎಂ ಜೊತೆ ನಡೆದ ಮಾತುಕತೆಯಲ್ಲಿ ನಾವು ಸಲ್ಲಿಸಿದ ಬೇಡಿಕೆ ಏನು ಮತ್ತು ಸರ್ಕಾರ ನೀಡಲು ಒಪ್ಪಿದ್ದು
ಏನು ಅನ್ನೋದನ್ನು ಕೋರ್ಟ್ಗೆ ತಿಳಿಸುವಂತೆ ನಮ್ಮ ವಕೀಲರಿಗೆ ಹೇಳಿದ್ದೇವೆ ಎಂದು ಸುಬ್ಬಾರಾವ್ ಹೇಳಿದರು. ನಾವು 24 ತಿಂಗಳ ಹಿಂಬಾಕಿ ಕೊಡಬೇಕೆಂದು ಬೇಡಿಕೆಯಿಟ್ಟರೆ ಸರ್ಕಾರ 16 ತಿಂಗಳ ಬಾಕಿ ಕೊಡಲು ತಯಾರಿದೆ, ಸರ್ಕಾರ ಮತ್ತು ನಮ್ಮ ನಡುವೆ ಹೆಚ್ಚೆಂದರೆ ₹1,000 ಕೋಟಿಗಳ ವ್ಯತ್ಯಾಸವಿದೆ ಎಂದು ಅವರು ಹೇಳಿದರು.