ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ ಖಾಕಿ: 7 ಮಂದಿ ಅರೆಸ್ಟ್, ಇಬ್ಬರು ಯುವತಿಯರು ರಕ್ಷಣೆ!

0
Spread the love

ಮೈಸೂರು:- ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಮೈಸೂರು ಪೊಲೀಸರು ಭೇದಿಸಿದ್ದು, ಘಟನೆಯಲ್ಲಿ 7 ಮಂದಿಯನ್ನು ಅರೆಸ್ಟ್ ಮಾಡಿ, ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

Advertisement

ಸರಸ್ವತಿಪುರಂ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಜಾಲ ಪತ್ತೆಯಾಗಿದೆ. ಸರ್ಕಾರಿ ಕೆಲಸ ಬಿಟ್ಟು ಥೈಲ್ಯಾಂಡ್​ನಿಂದ ಯುವತಿಯನ್ನು ಕರೆತಂದು ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿನ ಹೋಟೆಲ್​ನಲ್ಲಿ​ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರತನ್ ಎಂದು ಗುರುತಿಸಲಾಗಿದೆ. ಆರೋಪಿ ರತನ್​ ಕೆಎಸ್​​ಆರ್​​ಟಿಸಿ ನೌಕರಿ ಬಿಟ್ಟು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು. ವೈಶ್ಯಾವಾಟಿಕೆಗಾಗಿ ಥೈಲ್ಯಾಂಡ್​ನಿಂದ​​ ಯುವತಿಯನ್ನು ಕರೆಸಿದ್ದನು. ರತನ್ ನಡೆಸುತ್ತಿದ್ದ ವೇಶ್ಯಾವಾಟಿಕೆಗೆ ರೇವಣ್ಣ ಎಂಬಾತ ಸಾಥ್ ನೀಡಿದ್ದನು. ಆರೋಪಿ ರತನ್​ ​ಪ್ರತಿ ಗಿರಾಕಿಯಿಂದ 8-10 ಸಾವಿರ ರೂ. ವಸೂಲಿ ಮಾಡುತ್ತಿದ್ದನು. ಈ ಮಾಹಿತಿ ತಿಳಿದ ಸರಸ್ವತಿಪುರಂ ಠಾಣೆ ಪೊಲೀಸರು, ಶನಿವಾರ ಹೊಟೇಲ್​ ಮೇಲೆ ದಾಳಿ ಮಾಡಿ, ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಆರೋಪಿ ರತನ್​ ಸೇರಿದಂತೆ ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here