ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಭೆ ಯಾರ ಸ್ವತ್ತೂ ಅಲ್ಲ, ಸಾಧಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ಉನ್ನತ ಶಿಕ್ಷಣದಿಂದ ಜೀವನ ಉನ್ನತ ಹಂತಕ್ಕೇರುತ್ತದೆ ಎಂದು ರೋಟರಿ ಕ್ಲಬ್‌ನ3170 ಅಸಿಸ್ಟಂಟ್ ಡಿಸ್ಟ್ರಿಕ್ಟ್ ಗವರ್ನರ್ ಶಿವಾಚಾರ್ಯ ಹೊಸಳ್ಳಿಮಠ ಅಭಿಪ್ರಾಯಪಟ್ಟರು.
ಅವರು ಬುಧವಾರ ಗದುಗಿನ ಬಸವೇಶ್ವರ ನಗರದ ಪಿ.ಕೆ. ಕನ್ ಸ್ಟ್ರಕ್ಷನ್ ಪ್ರಾರಂಭೋತ್ಸವದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಟ್ಟಡಕಾರ್ಮಿಕನ ಮಗಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯವಾಗಲು ಲ್ಯಾಪ್‌ಟಾಪ್‌ನ್ನು ಪಿ.ಕೆ. ಕನ್ ಸ್ಟ್ರಕ್ಷನ್ ನಿಂದ ಉಡುಗೊರೆಯಾಗಿ ವಿತರಿಸಿ ಮಾತನಾಡಿದರು.
ಬಡತನದಲ್ಲೂ ಕಷ್ಟಪಟ್ಟು ಅಭ್ಯಾಸ ಮಾಡಿ ಪರಿಶ್ರಮದೊಂದಿಗೆ ಉನ್ನತ ಶಿಕ್ಷಣಕ್ಕೆ ಮುಂದಾಗಿರುವ ಈ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನ ಉತ್ತಮವಾಗಿರಲಿ. ಉತ್ತಮ ಶಿಕ್ಷಣದೊಂದಿಗೆ ಒಳ್ಳೆ ಸಂಸ್ಕೃತಿ, ಸಂಸ್ಕಾರದೊAದಿಗೆ ಸತ್ಪ್ರಜೆಗಳಾಗಿ ಬಾಳಲಿ ಎಂದರಲ್ಲದೆ, ಪಿ.ಕೆ. ಕನ್ ಸ್ಟ್ರಕ್ಷನ್ ಪ್ರತಿಭಾನ್ವಿತರಿಗೆ ಪುರಸ್ಕರಿಸಿ ಪ್ರೋತ್ಸಾಹಿಸಿದ್ದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿ ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ. ರೇವಣಸಿದ್ಧೇಶ್ವರ ಉಪ್ಪಿನ ಮಾತನಾಡಿ, ಸಮಾಜಮುಖಿಯಾಗಿ, ಜನಮುಖಿಯಾಗಿ ಕಾರ್ಯ ಮಾಡುತ್ತಿರುವ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಕ್ಲಬ್ ಶೈಕ್ಷಣಿಕ ಪ್ರಗತಿಯಾಗಿ ತನ್ನದೇ ಆದ ಕೊಡುಗೆ ನೀಡಿದೆ. ಬರಲಿರುವ ದಿನಗಳಲ್ಲಿಯೂ ಈ ಕಾರ್ಯ ಮುಂದುವರೆಯಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಕೆ. ಕನ್ ಸ್ಟ್ರಕ್ಷನ್ ನ ವ್ಯವಸ್ಥಾಪಕ ನಿರ್ದೆಶಕ ಪ್ರವೀಣಕುಮಾರ ಹಡಪದ, ಇಂದಿನ ಆಧುನಿಕ ದಿನಗಳಲ್ಲಿ ಜನರು ಕಟ್ಟಡ ವಿನ್ಯಾಸ, ವಾಸ್ತು, ಪದ್ಧತಿಗಳಿಗೆ ಮಹತ್ವ ನೀಡುವಂತೆ ವಿದ್ಯಾರ್ಥಿಗಳ ಬದುಕು ಸಹ ಶಿಸ್ತಿನಿಂದ ವಿನ್ಯಾಸಗೊಂಡು ಭವ್ಯ ಭವಿಷ್ಯವನ್ನು ರೂಪಿಸುವ ಶಿಕ್ಷಣ ಪಡೆಯಲು ಸಹ ಜೀವನ ಶೈಲಿಯನ್ನು ವಿನ್ಯಾಸ ಮಾಡಿಕೊಳ್ಳಬೇಕಿದೆ. ಯೋಜಿತ ಜೀವನ ಫಲ ನೀಡಬಲ್ಲದು. ಅಂತಹ ಶಿಸ್ತಿನ ಬದುಕು ವಿದ್ಯಾರ್ಥಿಗಳದ್ದಾಗಲಿ ಎಂದರು.
ವೇದಿಕೆಯ ಮೇಲೆ ರೇಖಾ ಹಾಗೂ ವಸ್ತçದ ಉಪಸ್ಥಿತರಿದ್ದರು. ಕಾವ್ಯಾ ಹಡಪದ, ಅನಸೂಯಾ ಡಂಬಳ ಪ್ರಾರ್ಥಿಸಿದರು. ಮುನ್ನಾ ಕಲ್ಮನಿ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಬಸಪ್ಪ ಹಡಪದ, ಶ್ರೀನಿವಾಸ ದೊಡ್ಡಮನಿ, ಮಹಾಂತೇಶ ದಶಮನಿ, ಲಿಂಗರಾಜ ಚಂದಪ್ಪನವರ, ಅಬ್ದುಲ್‌ಖಾದರ್ ಜಿಲಾನಿ, ಸಾಗರ ಚಂದಪ್ಪನವರ ಮುಂತಾದವರು ಪಾಲ್ಗೊಂಡಿದ್ದರು.