ವಿಜಯಸಾಕ್ಷಿ ಸುದ್ದಿ, ಧಾರವಾಡ: ಅಕ್ಟೋಬರ್ 27 ಮತ್ತು 28ರಂದು ನಡೆದ 7ನೇ ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ ಒಟ್ಟು 10 ಬಹುಮಾನಗಳನ್ನು ಧಾರವಾಡ ಜಿಲ್ಲೆ ಪಡೆದುಕೊಂಡಿದ್ದು, ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ ಅತಿ ಹೆಚ್ಚು ಬಹುಮಾನಗಳನ್ನು ಪಡೆದ ಘಟಕವಾಗಿದೆ.
ಪ್ರಥಮ ಸ್ಥಾನ: ಪಿ.ಎಸ್.ಐ ಇಮ್ರಾನ್ ಪಠಾಣ್ – ಕ್ರಿಮಿನಲ್ ಕಾನೂನು ಲಿಖಿತ ಪರೀಕ್ಷೆ.
ದ್ವಿತೀಯ ಸ್ಥಾನ: ಇಮ್ರಾನ್ ಪಠಾಣ್ – ವಿಧಿ ವಿಜ್ಞಾನ ಲಿಖಿತ ಪರೀಕ್ಷೆ, ಬೆರಳಚ್ಚು ವಿಭಾಗ, ಎಸ್.ಎನ್. ಖಾರಬಾರಿ – ಕಂಪ್ಯೂಟರ್ ಅರಿವು ವಿಭಾಗ, ವಿ.ಎಸ್. ನಾಟೇಕರ – ಛಾಯಾಗ್ರಹಣ ವಿಭಾಗ, ಎಸ್. ಹೀರೆಮಠ – ವೀಕ್ಷಣಾ ಪರೀಕ್ಷೆ, ಎಸ್.ಎಲ್. ಗೋಕಾವಿ – ವಾಹನ ಹುಡುಕಾಟ ವಿಭಾಗ, ಕೆ.ಎಂ. ನಧಾಪ್ – ಪ್ರವೇಶ ನಿಯಂತ್ರಣ ವಿಭಾಗ.
ತೃತೀಯ ಸ್ಥಾನ: ಎ.ಎಸ್. ತಿಗಡಿ – ಶ್ವಾನ ದಳದ ಸಮಯ ಟ್ರ್ಯಾಕರ್ ವಿಭಾಗ, ರವಿ ದತ್ತಿ – ವಾಹನ ಹುಡುಕಾಟ ವಿಭಾಗಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.
ಸಿಬ್ಬಂದಿಗಳ ಈ ಸಾಧನೆಗೆ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.


