ಮುಕ್ತಿಮಂದಿರಕ್ಕೆ ಗುಗ್ಗಳ ಸಮೇತ ಪಾದಯಾತ್ರೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸವಣೂರ ಪಟ್ಟಣದ ಶ್ರೀ ವೀರಭದ್ರೇಶ್ವರ ಗುಗ್ಗಳ ಪಾದಯಾತ್ರಾ ಸೇವಾ ಸಮಿತಿಯವರು 30 ಕಿ.ಮೀ ದೂರದ ಮುಕ್ತಿಮಂದಿರ ಧರ್ಮಕ್ಷೇತ್ರದವರೆಗೆ ಗುಗ್ಗಳ ಸಮೇತ ಪಾದಯಾತ್ರೆ ನಡೆಸಿ ಲಿಂ.ಜ. ವೀರಗಂಗಾಧರರ ಗದ್ದುಗೆ ದರ್ಶನ ಮಾಡಿದರು.

Advertisement

ಈ ವೇಳೆ ಪುರವಂತರರು ಶ್ರೀಗಳ ಎದುರಿನಲ್ಲಿ ಗುಗ್ಗಳದ ಮೂಲಕ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಲಿಂ.ವೀರಗಂಗಾಧರ ಜಗದ್ಗುರುಗಳು ವಿಶ್ವಶಾಂತಿ ಮಂತ್ರದ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ. ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಎಲ್ಲ ಧರ್ಮಗಳ ಶ್ರೇಷ್ಠ ಪುರುಷರ ಪುತ್ಥಳಿ ಸ್ಥಾಪಿಸುವ ಮೂಲಕ ಸರ್ವಧರ್ಮಗಳ ಸಾರ ಒಂದೇ ಎಂದು ತೋರಿಸಿದ್ದಾರೆ. ಇದೀಗ ಲಿಂ.ಜ.ಗಳ ತ್ರಿಕೋಟಿ ಲಿಂಗ ಸ್ಥಾಪನೆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ನಾಡಿನಾದ್ಯಂತ ಲಿಂ.ವೀರಗಂಗಾಧರ ಜಗದ್ಗುರುಗಳ ಭಕ್ತಗಣವಿದೆ. 30 ಕಿ.ಮೀ ದೂರದಿಂದ ಗುಗ್ಗುಳ ಸಮೇತ ಪಾದಯಾತ್ರೆ ಮಾಡಿರುವುದು ಅಜ್ಜಯ್ಯನ ಮೇಲಿನ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿದೆ ಎಂದರು.

ಸಮಿತಿಯ ಗೌರವಾಧ್ಯಕ್ಷ ಗಂಗಯ್ಯನವರು ಸಾಲಿಮಠ, ವೀರಪ್ಪ ಮತ್ತಿಗಟ್ಟಿ, ನಾಗಪ್ಪ ಕುಂಬಾರ, ಆನಂದ ಮತ್ತಿಗಟ್ಟಿ, ವಿನಾಯಕ ಕೋಳೂರ, ರಾಜಣ್ಣ ಮಟಿಗಾರ, ಶಂಕ್ರಪ್ಪ ತಿಮ್ಮಕ್ಕನವರ, ಶಿವಮೂರ್ತೆಯ್ಯ ಚರಂತಿಮಠ, ಶಿವಾನಂದ ಕುಲಕರ್ಣಿ, ಮಲ್ಲಪ್ಪ ನೀರಲಗಿ, ಗಂಗಾಧರ, ಯೋಗೇಂದ್ರ ಜಂಬಗಿ, ನಿಂಗನಗೌಡ ದೊಡ್ಡಗೌಡ, ಅಶೋಕ ಕಾಳಶೆಟ್ಟರ, ಪ್ರಕಾಶ ಉಪನಾಳ, ಲಕ್ಷ್ಮೀ ಹಂಗನಕಟ್ಟಿ ಹಾಗೂ ಸವಣೂರಿನ ಶ್ರೀ ವೀರಭದ್ರೇಶ್ವರ ಗುಗ್ಗಳ ಸಮೇತ ಪಾದಯಾತ್ರಾ ಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here