ಚಾಮರಾಜನಗರ :- ಇಲ್ಲಿನ ಹಿಮವದ್ ಗೋಪಾಲಸ್ವಾಮಿ ದೇವಾಲಯ ನಾಳೆಯಿಂದ ಅಂದ್ರೆ ದಿನಾಂಕ 29 ಹಾಗೂ 30 ರಂದು ಈ ಎರಡು ದಿನಗಳು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಎಸ್, ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯ ನಾಳೆಯಿಂದ ಎರಡು ದಿನ ಬಂದ್ ಇರಲಿದೆ.
ದೇವಾಲಯಕ್ಕೆ ತೆರಳುವ ಒಂದು ಕಡೆ ರಸ್ತೆ ಪಕ್ಕದ ಪ್ಯಾರಪಿಟ್ ವಾಲ್ ಕುಸಿದಿರುವ ಕಾರಣ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯವನ್ನು ಎರಡು ದಿನಗಳ ಕಾಲ ನಡೆಸಲಿದೆ. ಇದರಿಂದ ಬೆಟ್ಟದ ಮೇಲಿರುವ ದೇವಾಲಯ ತೆರೆಯುವುದಿಲ್ಲ. ಅಲ್ಲದೇ ಈ ಎರಡೂ ದಿನ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಪ್ರವಾಸಿಗರು ಹಾಗೂ ಭಕ್ತರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.



