ಹಿಂದು ʼಅಶ್ಲೀಲʼ ಪದ ಹೇಳಿಕೆ; ಸಚಿವ ಸತೀಶ್ ಜಾರಕಿಹೊಳಿಗೆ ನೋಟಿಸ್ ಜಾರಿ

0
Spread the love

ಬೆಂಗಳೂರು:- ಹಿಂದು ಧರ್ಮದ‌ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ದೂರು‌ ದಾಖಲಾಗಿದ್ದರಿಂದ ಸತೀಶ್ ಜಾರಕಿಹೊಳಿಗೆ ನ್ಯಾಯಾಲಯ ನೋಟಿಸ್‌ ನೀಡಿದೆ.

Advertisement

ವಕೀಲ‌ ದಿಲೀಪ್ ಕುಮಾರ್ ಎಂಬುವವರು ದೂರು ನೀಡಿದ್ದರಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಿಂದ ವಿಚಾರಣಗೆ ಹಾಜರಾಗುವಂತೆ ಸತೀಶ್‌ ಜಾರಕಿಹೊಳಿಗೆ ನೋಟಿಸ್‌ ನೀಡಲಾಗಿದೆ. 2022ರ ನವೆಂಬರ್‌ 7ರಂದು ಕಾರ್ಯಕ್ರಮವೊಂದರಲ್ಲಿ ಹಿಂದು ಪದಕ್ಕೆ ಆಶ್ಲೀಲ ಅರ್ಥವಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರ್ಟ್‌ಗೆ ವಕೀಲ‌ ದೂರು ನೀಡಿದ್ದಾರೆ.

ಹಿಂದು ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಜಾರಕಿಹೊಳಿ ವಿರುದ್ಧ ಹಿಂದು ಸಂಘಟನೆಗಳು, ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರಹಾಕಿದ್ದರು. ನಂತರ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಹಲವು ತಿಂಗಳ ಬಳಿಕ ಪ್ರಕರಣದಲ್ಲಿ ಸಚಿವರ ವಿರುದ್ಧ ದೂರು ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here