ಧಾರವಾಡ: ವಿದ್ಯಾಕಾಶಿ ಧಾರವಾಡಕ್ಕೆ ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾದ ಸಾಮಾಜಿಕ ಕಾರ್ಯಕರ್ತೆ ಮಾಧವಿ ಲತಾ ಅವರು ಆಗಮಿಸಿದ್ದಾರೆ.
ಧಾರವಾಡದ ಜೆಎಸ್ಎಸ್ ಕಾಲೇಜು ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಜಯಂತ್ಯುತ್ಸವ ಪ್ರಯುಕ್ತ ರಥಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಮಾಧವಿ ಲತಾ ಅವರು ಧಾರವಾಡಕ್ಕೆ ಆಗಮಿಸಿದ್ದರು.
ಮಾಧವಿ ಲತಾ ಅವರು ಆಗಮಿಸುತ್ತಿದ್ದಂತೆ ಎಬಿವಿಪಿ ಕಾರ್ಯಕರ್ತರು ಹಾಗೂ ಕಾಲೇಜು ಆಡಳಿತ ಮಂಡಳಿಯವರು ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ ಮಾಧವಿ ಲತಾ ಅವರಿಗೆ ಪೇಟ ಕೂಡ ತೊಡಿಸಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಡೆದ ನೃತ್ಯಗಳನ್ನು ನೋಡಲು ಮಾಧವಿ ಲತಾ ಅವರು ಇತರ ವಿದ್ಯಾರ್ಥಿಗಳೊಂದಿಗೆ ನೆಲದ ಮೇಲೆಯೇ ಕುಳಿತು ನೃತ್ಯಗಳನ್ನು ವೀಕ್ಷಿಸಿದರು.



