ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪೇಟೆ ಹನುಮಂತದೇವರ ದೇವಸ್ಥಾನದ ಹತ್ತಿರ ಹಿಂದೂ ಮಹಾಗಣಪತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಬೃಹತ್ ಹಾಗೂ ಸುಂದರವಾದ ಗಣೇಶನ ಮೂರ್ತಿಯ ವಿಸರ್ಜನೆ ಕಾರ್ಯಕ್ರಮವು ಸೆ.25ರಂದು ಮದ್ಯಾಹ್ನ 1 ಗಂಟೆಗೆ ಪ್ರಾರಂಭವಾಗಲಿದೆ.
21 ಅಡಿಗೂ ಅಧಿಕ ಎತ್ತರದ ಬೃಹತ್ ಮೂರ್ತಿಯನ್ನು ಹಿಂದೂ ಮಹಾಸಭಾ ಯುವಕರ ತಂಡ ಪ್ರತಿಷ್ಠಾಪಿಸಿದ್ದು, ಸಮಿತಿ ವತಿಯಿಂದ ಸಂಪ್ರದಾಯಬದ್ಧವಾದ ಪ್ರಜೆ-ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿದೆ.
ಅನೇಕ ಸಾಂಸ್ಕೃತಿಕ, ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗಮನ ಸೆಳೆಯುತ್ತಿದೆ. ಬುಧವಾರ ಮದ್ಯಾಹ್ನ 1 ಗಂಟೆಗೆ ಅದ್ದೂರಿ ಮೆರವಣಿಗೆಯು ಪಟ್ಟಣದ ಹಾಗೂ ಸುತ್ತಮುತ್ತಲಿನ ಸಾವಿರಾರು ಜನರ ಸಮ್ಮುಖದಲ್ಲಿ ಪ್ರಾರಂಭವಾಗಲಿದ್ದು, ಮೆರವಣಿಗೆಗೆ ಹಲವು ಮುಖಂಡರು ಚಾಲನೆ ನೀಡಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕು ಎಂದು ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಫಕ್ಕೀರೇಶ ಅಣ್ಣಿಗೇರಿ ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.