ಚಿತ್ರದುರ್ಗ: ಲಿಂಗಾಯತ ಧರ್ಮವನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಜಿಲ್ಲೆಯ ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಹಿಂದೂ ಎಂಬುದು ಅನೈತಿಕ, ಅನಾಚಾರ ಒಳಗೊಂಡಿದೆ ಎಂದು ಹೇಳಿದ್ದಾರೆ.
ಬಸವಣ್ಣನವರ ಹಿಂದಿನ ಧರ್ಮ ದಯಾಧೀನ ಧರ್ಮ. ಬಸವಣ್ಣನವರು ದಯವೇ ಧರ್ಮದ ಮೂಲ ಎಂದರು. ವೇದ ಪುರಾಣಗಳನ್ನು ಶರಣರು ತಿರಸ್ಕಾರ ಮಾಡಿದ್ದರು. ಅಹಿಂಸಾ ಜೀವನ ನಡೆಸಬೇಕೆಂದು ಬಸವಣ್ಣ ಹೇಳಿದರು. ಸಿಂಧೂ ನದಿಯ ಬಯಲಿನಲ್ಲಿ ಇರುವವರು ಹಿಂದೂಗಳು ಎಂದಿದ್ದಾರೆ.



