ಗದಗ: ನಾಯಿ ಮಾಂಸ ಸಿಕ್ಕಿದೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಗದಗನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಸ್ಟೆಷನ್ ನಲ್ಲಿ 90 ಮಾಂಸದ ಬಾಕ್ಸ್ ಗಳು ಸಿಕ್ಕಿವೆ. ಅವು ನಾಯಿ ಮಾಂಸ ಇರುವ ಬಾಕ್ಸ್ ಗಳು. ಕಳೆದ 15ವರ್ಷದಿಂದ ಅಬ್ದುಲ್ ರಜಾಕ್ ನಾಯಿ ಮಾಂಸ ತಿನ್ನಿಸುತ್ತಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಬಿಎಂಪಿಯ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರಾ.? ಹಿಂದೂಗಳೇ ರುಚಿ-ರುಚಿಯಾದ ಹಂದಿ, ನಾಯಿ, ನರಿ, ಬೆಕ್ಕಿನ ಮಾಂಸ ತಿನ್ನಿರಿ ಎಂದು ಹಿಂದೂಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಅಬ್ದುಲ್ ರಜಾಕ್ ಎನ್ನುವನು ಒಬ್ಬ ದೇಶದ್ರೋಹಿ ಈ ಕೆಲಸ ಮಾಡುತ್ತಿದ್ದಾನೆ. ರಾಜಸ್ಥಾನದಿಂದ ನಾಯಿ ಮಾಂಸ ತರಿಸಿ ಮಾರುತ್ತಿದ್ದಾನೆ. ಅದಲ್ಲದೆ ಅಬ್ದುಲ್ ರಜಾಕ್ ಬೆನ್ನಿಗೆ ಜಮ್ಮಿರ್ ಅಹ್ಮದ್ ನಿಂತಿದ್ದಾರೆ.
ಆದ್ದರಿಂದ ಹಿಂದೂಗಳು ಈಗಲಾದರೂ ಎಚ್ಚರಗೋಳ್ಳಬೇಕು. ಮುಸ್ಲಿಂಮರ ಅಂಗಡಿಯಲ್ಲಿ ಆಹಾರ ತಿನ್ನುವುದನ್ನು ನಿಲ್ಲಿಸಬೇಕು. ನಾಯಿ ಮಾಂಸದ ಬಾಕ್ಸ್ ಮೇಲೆ ಮೀನಿನ ಮಾಂಸ ಎಂದು ಬರೆದು ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜು ಖಾನಪ್ಪನವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.