ಯಾದಗಿರಿ: ಒಗಟ್ಟಿನಿಂದ ಇರುವುದನ್ನು ಹಿಂದೂಗಳು ಕಲಿತುಕೊಳ್ಳಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಶಹಾಪುರ ನಗರದಲ್ಲಿ ಮಾತನಾಡಿದ ಅವರು, ಜಾತಿಯ ಭಾವನೆ ಬಿಟ್ಟು ಹಿಂದೂಗಳೆಲ್ಲ ಒಂದು ಎಂಬ ಭಾವನೆ ಬರುವವರೆಗೆ ನಿಮ್ಮ ಮೇಲೆ ಆಕ್ರಣಗಳು ಮುಂದುವರೆಯುತ್ತಿರುತ್ತವೆ. ಮುಂದೊಂದಿನ ಗಂಡಾಂತರವನ್ನು ನೀವೇ ಮೈಮೇಲೆ ಎಳೆದುಕೊಳ್ಳುತ್ತೀರಿ. ಹೀಗಾಗಿ ಒಗಟ್ಟಿನಿಂದ ಇರುವುದನ್ನು ಹಿಂದೂಗಳು ಕಲಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ತಿರುಮಲ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆ ಆರೋಪದ ಕುರಿತು ಪ್ರತಿಕ್ರಿಯಿಸಿ, ಜಗನ್ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಟಿಟಿಡಿಗೆ ಕ್ರಿಶ್ಚಿಯನ್ನರನ್ನು ತಂದು ಹಾಕುವ ಕೆಲಸ ನಡೆಯಿತು. ತಿರುಮಲ ದೇವಸ್ಥಾನದ ಲಡ್ಡು ಪರಿಮಳ ಬರುತ್ತಿತ್ತು. ಆ ಲಡ್ಡುವನ್ನು ಅಪವಿತ್ರ ಮಾಡುವ ಕೆಲಸ ನಡೆದಿದೆ. ಅದರಲ್ಲಿ ದನದ, ಹಂದಿಯ ಕೊಬ್ಬು, ಮೀನಿನ ಎಣ್ಣೆ ಹಾಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ಕೆಲಸವನ್ನು ಜಗನ್ಮೋಹನ್ ರೆಡ್ಡಿ ಮಾಡಿದ್ದಾರೆ ಎಂದು ಹೇಳಿದರು.


