ಬೆಂಗಳೂರು: ಕನ್ನಡಿಗರು ವಿಶಾಲ ಹೃದಯದವರು. ಕರ್ನಾಟಕ ಅಂದ್ರೆ ಕನ್ನಡ ನೆನಪಾಗುತ್ತೆ. ಕನ್ನಡವನ್ನ ದೇವರಂತೆ ಪೂಜಿಸುತ್ತಾರೆ ಇಲ್ಲಿನ ಜನ. ಇನ್ನು ಬೆಂಗಳೂರು ಅಂದ್ರೆ ಸಾಕು ಹಲವು ಭಾಷೆಯ, ಹಲವು ಸಂಸ್ಕೃತಿಯ ಜನ ಇಲ್ಲಿ ಒಗ್ಗೂಡುತ್ತಾರೆ. ಆದ್ರೆ ಅದೆಷ್ಟೇ ಪರಭಾಷೆಯ ಜನ ಬಂದರೂ ಬೆಂಗಳೂರು ಯಾರನ್ನೂ ಬಿಟ್ಟುಕೊಟ್ಟಿಲ್ಲ. ಬಂದವರಿಗೆಲ್ಲರಿಗೂ ಉದ್ಯೋಗವಕಾಶ, ವೇದಿಕೆಗಳನ್ನು ನೀಡಿದೆ. ಆದ್ರೆ ಇತ್ತೀಚೆಗೆ ಕನ್ನಡಿಗರಿಗಿಂತಲೂ ಪರಭಾಷಿಕರ ದೌರ್ಜನ್ಯ, ದಬ್ಬಾಳಿಕೆಯೇ ಜಾಸ್ತಿ ಆಗಿದೆ.
ಇದೀಗ ಮತ್ತೊಬ್ಬ ಹಿಂದಿವಾಲಾ ಕನ್ನಡಿಗ ಡೆಲಿವರಿ ಬಾಯ್ ಮೇಲೆ ಬಾಯಿಗೆ ಬಂದಂತೆ ನಿಂದಿಸಿರುವ ಆಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದು, ಇದೀಗ ಆತ ಪೋಲಿಸರ ಅಥಿತಿಯಾಗಿದ್ದಾನೆ. ಅಂದಹಾಗೆ ಈ ಆಡಿಯೋದಲ್ಲಿರುವ ವ್ಯಕ್ತಿ ಹೆಸರು ಮಿಥುನ್ ಸರ್ಕಾರ್ ಅಂತ. ಬೆಂಗಾಲಿ ಮೂಲದವನಾಗಿರುವ ಇವನು ಬೊಮ್ಮನಹಳ್ಳಿಯ ಬೇಗೂರಿನಲ್ಲಿ ವಾಸವಿದ್ದಾನೆ.
ಈತ ಆನ್ಲೈನ್ನಲ್ಲಿ ಟೀ ಶರ್ಟ್ ಬುಕ್ ಮಾಡಿದ್ದ. ಈ ಸಂಬಂಧ ಕೋರಿಯರ್ ಬಾಯ್ ರಂಜಿತ್ ಎಂಬ ಯುವಕ ಈತನ ವಿಳಾಸ ಕೇಳೋಕೆ ಅಂತ ನಿನ್ನೆ ಬೆಳಗ್ಗೆ 9 ಗಂಟೆ ವೇಳೆ ಕಾಲ್ ಮಾಡಿದ್ದಾನೆ. ಭಾಷೆ ವಿಚಾರಕ್ಕೆ ಖ್ಯಾತೆ ತೆಗೆದ ಮಿಥುನ್ ಸರ್ಕಾರ್ ಕನ್ನಡಿಗನಾಗಿರುವ ರಂಜಿತ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಬಾಯಿಗೆ ಬಂದಂತೆ ಕನ್ನಡಿಗರನ್ನ ಬೈದಿದ್ದಾನೆ. ರೆಕಾರ್ಡ್ ಆಗ್ತಿದೆ ಕನ್ನಡಿಗರನ್ನ ಇಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡಬೇಡಿ ಅಂತ ರಂಜಿತ್ ಕೇಳಿಕೊಂಡ್ರೂ ದುರಹಂಕಾರಿ ಹಿಂದಿವಾಲ ಮಿಥುನ್ ಮಿತಿಮೀರಿ ಕನ್ನಡಿಗರ ವಿರುದ್ದ ವರ್ತಿಸಿದ್ದಾನೆ.ಬೆಂಗಳೂರಲ್ಲಿ 70% ಹಿಂದಿಯವರು ಇದ್ದೇವೆ. ನಾವ್ ಇಲ್ಲಿಂದ ಹೋದರೆ ಕನ್ನಡಿಗರ ಬಳಿ ಟೊಮೆಟೊ ತೆಗೆದುಕೊಳ್ಳೋಕು 10 ರೂ ಗತಿ ಇರೋಲ್ಲ ಅಂತ ನಾಲಿಗೆ ಹರಿಬಿಟ್ಟಿದ್ದಾನೆ.
ಸದ್ಯ ಮನ ಬಂದಂತೆ ನಾಲಿಗೆ ಹರಿಬಿಟ್ಟಿರುವ ಮಿಥುನ್ ಸರ್ಕಾರ್ ವಿರುದ್ಧ ಕರವೇ ಪ್ರವೀಣ್ ಬಣದ ಬೊಮ್ಮನಹಳ್ಳಿ ಘಟಕದ ಅಧ್ಯಕ್ಷ ಮಹೇಶ್ ಗೌಡ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಬೊಮ್ಮನಹಳ್ಳಿ ಪೋಲಿಸರು ರಾತ್ರಿಯಿಡೀ ಆತನ ಟವರ್ ಲೋಕೆಷನ್ ಕ್ಯಾಚ್ ಮಾಡಿ ಬೆಳಿಗ್ಗೆ 4 ಸುಮಾರಿಗೆ ಹೊಂಗಸಂದ್ರ ಮನೆಯೊಂದರಲ್ಲಿ ಲಾಕ್ ಮಾಡಿ ಠಾಣೆಗೆ ಎತ್ತಕೊಂಡು ಸರಿಯಾಗಿ ಬೆಂಡ್ ಎತ್ತಿದ್ದಾರೆ.