ಸ್ವಗ್ರಾಮ ಫೆಲೋಶಿಪ್ ಪ್ರತಿನಿಧಿಗಳಿಂದ ಹಿರೆಕೆರೆ ವೀಕ್ಷಣೆ

0
???????
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿ ಸ್ವಗ್ರಾಮ ಫೆಲೋಶಿಪ್‌ನ 8ನೇ ಅವಲೋಕನಾ ಸಭೆಯ ಪ್ರತಿನಿಧಿಗಳು ರವಿವಾರ ಬೆಳಿಗ್ಗೆ ಹಿರೆಕೆರೆಯನ್ನು ಸಂದರ್ಶಿಸಿ ಮಾಹಿತಿ ಪಡೆದುಕೊಂಡರು. ನೆಲಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಗುರುರಾಜ ಕುಲಕರ್ಣಿ ಪ್ರತಿನಿಧಿಗಳಿಗೆ ಸಮಿತಿಯಿಂದ ಕೆರೆಯ ಹೂಳೆತ್ತಿದ ವಿವರಣೆಯನ್ನು ನೀಡಿದರು.

Advertisement

ಈ ಕಾರ್ಯಕ್ಕೆ ನಮಗೆ ಪ್ರೇರಣೆಯಾದವರು ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು. 2017ರಲ್ಲಿ ದ್ಯಾಮವ್ವನ ಜಾತ್ರೆಗೆಂದು ಬಂದಿದ್ದ ಅವರು ಈ ವಿಷಯವನ್ನು ತಿಳಿಸಿ ಒಂದು ಲಕ್ಷ ರೂ.ಗಳ ಅನುದಾನವನ್ನು ನೀಡಿ ಕಾರ್ಯ ಪ್ರಾರಂಭಿಸಲು ಪ್ರೇರಣೆ ನೀಡಿದರು. ಜಿಲ್ಲಾಧಿಕಾರಿಗಳಿಂದ, ಪ.ಪಂನಿಂದ ಅನುಮತಿ ಪಡೆದು ಈ ಕೆರೆಯ ಹೂಳನ್ನು ಅಂದಾಜು 15 ಅಡಿಯವರೆಗೆ ತೆಗೆದಿದ್ದೇವೆ. ಇದರಲ್ಲಿ ನರೇಗಲ್ಲ ಮತ್ತು ಮಜಿರೆ ಗ್ರಾಮಗಳ ಜನರ, ರೈತರ, ಕಟ್ಟಡ ಕಾರ್ಮಿಕರ ಸಹಕಾರ ಬಹಳಷ್ಟು ದೊಡ್ಡದು ಎಂದರು.

ಸದಸ್ಯ ಜಗದೀಶ ಸಂಕನಗೌಡ್ರ ಮಾತನಾಡಿ, ಈ ಕೆರೆಯ ಹೂಳೆತ್ತುವ ಕಾರ್ಯವನ್ನು ಜನ ಮೆಚ್ಚಿಕೊಂಡು ನಮ್ಮ ಸಮಿತಿಯ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದನ್ನು ನಾವೆಂದಿಗೂ ಮರೆಯುವಂತಿಲ್ಲ. ನಮಗೆ ಸಲಹೆ, ಮಾರ್ಗದರ್ಶನ ನೀಡಿದವರು ಶಿವಾನಂದ ಕಳವೆಯವರು ಎಂದರು.

ಶಿವನಗೌಡ ಪಾಟೀಲ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರು ಈ ಕೆರೆಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ಈಗಾಗಲೇ ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ ಎಂದರು.

ಎರಡು ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಕುಲಪತಿಗಳು, ರಾಜ್ಯದ ವಿವಿಧೆಡೆಯಿಂದ ಬಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಂಜೆ ಗರಡಿ ಮನೆ ಭೇಟಿ, ದೊಡ್ಡಾಟ ಕಲೆ, ಭಜನಾ ಕಲೆಗಳ ವೀಕ್ಷಣೆಯನ್ನು ಮಾಡಿ ಸಂತಸಪಟ್ಟರು. ಈ ಸಂದರ್ಭದಲ್ಲಿ ಶಿಬಿರಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕ ಡಿ. ಆರ್. ಪಾಟೀಲ ದೊಡ್ಡಾಟ ಪ್ರದರ್ಶನ ನೋಡಿ ಸಂತಸಪಟ್ಟರು.


Spread the love

LEAVE A REPLY

Please enter your comment!
Please enter your name here