ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಸುತ್ತಮುತ್ತ ಇರುವ ಐತಿಹಾಸಿಕ ಸ್ಥಳಗಳನ್ನು ಹಾಗೂ ಸ್ಮಾರಕಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅಂಚೆ ಆಧೀಕ್ಷಕರಾದ ಜಯದೇವ ಕಡಗಿ ಹೇಳಿದರು.
ಅವರು ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ಗುರುವಾರ ಅಂಚೆ ಇಲಾಖೆಯಿಂದ ಜರುಗಿದ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಐತಿಹಾಸಿಕ ಸ್ಥಳಗಳು ದೇಶದ ಶ್ರೀಮಂತಿಕೆ ಸಾರುವ ಆಸ್ತಿಗಳಾಗಿವೆ. ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ಅಧೀಕ್ಷಕ ಸುನಿಲ್‌ಕುಮಾರ ವಿ, ಪ್ರಧಾನ ಅಂಚೆಪಾಲಕ ದೊಡ್ಡಪ್ಪ ಇಟಗಿ, ನಗರ ಅಂಚೆಪಾಲಕ ಮಂಜುನಾಥ ಕುರಿಯವರ, ಉಪ ಅಂಚೆಪಾಲಕ ಡಿ.ಜಿ. ಮ್ಯಾಗೇರಿ, ಗದಗ ಶಹರದ ಅಂಚೆ ಇಲಾಖೆ ಸಿಬ್ಬಂದಿಗಳು ಹಾಗೂ ಪೋಸ್ಟ್ ಮ್ಯಾನ್‌ಗಳು ಪಾಲ್ಗೊಂಡಿದ್ದರು.



