ಸಮುದಾಯದಲ್ಲಿ ಏಡ್ಸ್ ಜಾಗೃತಿ ಮೂಡಿಸಿ : ಡಾ. ಅರುಂಧತಿ ಕುಲಕರ್ಣಿ

0
HIV AIDS awareness programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಗದಗ ಜಿಲ್ಲೆಯ ಆದರ್ಶ ಶಿಕ್ಷಣ ಸಮಿತಿಯ ಎನ್.ಎಸ್.ಎಸ್. ಹಾಗೂ ರೆಡ್ ರಿಬ್ಬನ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಹೆಚ್.ಐ.ವಿ/ಏಡ್ಸ್ ತಡೆಗಟ್ಟಲು ತೀವ್ರತರವಾದ ಐ.ಇ.ಸಿ ಪ್ರಚಾರಾಂದೋಲನ-2024ರ ಅಂಗವಾಗಿ ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಂದ ಫ್ಲ್ಯಾಶ್ ಮೊಬ್ ಮೂಲಕ ಹೆಚ್.ಐ.ವಿ. ಏಡ್ಸ್ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Advertisement

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ. ಅರುಂಧತಿ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಚ್.ಐ.ವಿ. ಏಡ್ಸ್ ತಡೆಗಟ್ಟುವಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಎಲ್ಲ ಯುವಕರು ತ್ವರಿತಗತಿಯಲ್ಲಿ ಹೆಚ್.ಐ.ವಿ. ಬಗ್ಗೆ ಪ್ರಚಾರ ಮಾಡಿ, ಫ್ಲ್ಯಾಶ್ ಮೊಬ್, ಬೀದಿ ನಾಟಕ ಹಾಗೂ ಸಂಗೀತ ಕಲಾ ಪ್ರದರ್ಶನಗಳ ಮೂಲಕ ಹೆಚ್.ಐ.ವಿ. ಏಡ್ಸ್ ಅರಿವನ್ನು ಸಮುದಾಯದಲ್ಲಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಕೆ. ಗಿರಿರಾಜ ಕುಮಾರ ಮಾತನಾಡಿ, ವಿದ್ಯಾರ್ಥಿಗಳು ಯೌವನದಲ್ಲಿ ತಮ್ಮ ಜೀವನವನ್ನು ಜೋಪಾನ ಮಾಡಿಕೊಂಡು ಆರೋಗ್ಯಕರ ನಡುವಳಿಕೆಗಳನ್ನು ರೂಪಿಸಿಕೊಳ್ಳಲು ಕರೆ ನೀಡಿದರು.

ಬಸವರಾಜ ಲಾಳಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ತೀವ್ರತರದ ಹೆಚ್.ಐ.ವಿ. ಏಡ್ಸ್ ತಡೆಗಟ್ಟುವ ಪ್ರಾಚಾರಾಂದೋಲನ-2024ರ ಗುರಿ ಹಾಗೂ ಉದ್ದೇಶಗಳನ್ನು ತಿಳಿಸುತ್ತಾ, ನವೀನ ತಂತ್ರಜ್ಞಾನಗಳ ಮೂಲಕ ಅಂದರೆ ರೀಲ್ಸ್, ಫ್ಲ್ಯಾಶ್ ಮೊಬ್, ಜಾನಪದ ಕಲೆ ಮೂಲಕ ಪ್ರಚಾರ ಮಾಡುವ್ಯದರಿಂದ ಬಹಳಷ್ಟು ಜನರಿಗೆ ತಲುಪುವ ವಿಶ್ವಾಸವಿದೆ ಎಂದರು.

ಫ್ಲ್ಯಾಶ್ ಮೊಬ್ ಜನ ಜಾಗೃತಿ ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ವಿ.ಟಿ. ನಾಯ್ಕರ, ಪ್ರೊ. ಸಲ್ಮಾ, ಪ್ರೊ. ಪ್ರಿಯಾಂಕಾ, ಪ್ರೊ. ವೀಣಾ ಪತ್ರಿ, ವಿದ್ಯಾರ್ಥಿ ಪ್ರತಿನಿಧಿ ಜನಕರೆಡ್ಡಿ, ಎನ್,ಎಸ್.ಎಸ್ ಸ್ವಯಂ ಸೇವಕರು, ಕಾಲೇಜು ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ರವಿ ಪತ್ತಾರ ಹಾಜರಿದ್ದರು. ಪ್ರೊ. ಬಾಹುಬಲಿ ಜೈನರ್ ಸ್ವಾಗತಿಸಿದರು.

ಯುವಕರು ಸಂಯಮದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಧೃಢ ಆರೋಗ್ಯವನ್ನು ಹೊಂದಿ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಲು ಕೈಗೂಡಿಸಬೇಕು. ಪ್ರಚಾರಾಂದೋಲನ ಮತ್ತು ಫ್ಲ್ಯಾಶ್ ಮೊಬ್‌ದ ಉದ್ದೇಶ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು, ಸೇವಾ ಸೌಲಭ್ಯಗಳ ಮಾಹಿತಿ, ಕಳಂಕ ಮತ್ತು ತಾರತಮ್ಯವನ್ನು ತಡೆಗಟ್ಟುವುದು, ಹೆಚ್.ಐ.ವಿ.ಏಡ್ಸ್ ತಡೆ ಕಾಯ್ದೆ-2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ಸಹಾಯವಾಣಿ-1097, ಎಸ್,ಟಿ.ಐ. ಖಾಯಿಲೆಗಳು ಇತಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ಸ್ಪರ್ಧೆಯ ಉದ್ದೇಶ ಎಂದು ಡಾ. ಅರುಂಧತಿ ಕುಲಕರ್ಣಿ ಹೇಳಿದರು.

 


Spread the love

LEAVE A REPLY

Please enter your comment!
Please enter your name here