ವಿಜಯಸಾಕ್ಷಿ ಸುದ್ದಿ, ಗದಗ : ಸ್ವಾತಂತ್ರ‍್ಯಕ್ಕಾಗಿ ತ್ಯಾಗ-ಬಲಿದಾನ ಮಾಡಿದ ಅನೇಕ ಮಹನೀಯರನ್ನು ನಾವಿಂದು ನೆನೆಯಬೇಕಿದೆ. ಸ್ವಾತಂತ್ರ‍್ಯ ಹೋರಾಟಗಾರರಲ್ಲಿ ಮಹಿಳೆಯರು ಕೂಡಾ ಹೋರಾಡಿದ್ದಾರೆ. ಅಲ್ಲದೆ, ಈಗ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂದು ಆರ್.ಎಮ್.ಎಸ್.ಎಸ್ ಸಂಸ್ಥೆಯ ಬಿ.ಎಸ್ಸಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಬಸಯ್ಯಾ ಹಿರೇಮಠ ಹೇಳಿದರು.
ಹುಲಕೋಟಿಯ ಸ್ವಾಮಿ ವಿವೇಕಾನಂದ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 78ನೇ ಸ್ವಾತಂತ್ರ‍್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರಿಯಾ ಎಮ್.ಪಾಟೀಲ ವಹಿಸಿ ಮಾತನಾಡಿ, ಸ್ವಾತಂತ್ರ‍್ಯಕ್ಕಾಗಿ ಬಲಿದಾನ ಮಾಡಿದ ಅನೇಕ ಮಹನೀಯರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶ್ರೀರಕ್ಷಾ ಕುಲಕರ್ಣಿ, ಪವಿತ್ರಾ ಸನ್ನಿಂಗಣ್ಣವರ, ಅನು ಲಮಾಣಿ, ಆಕಾಶ ಹಾಗೂ ಡೋಣಾ ಕಾರ್ಯಕ್ರಮದ ಕುರಿತು ಭಾಷಣ ಮಾಡಿದರು. ಕಾವೇರಿ ಭದ್ರಾಪುರ, ರಿಂಕು, ಗಾಯತ್ರಿ ಹಾಗೂ ಭುವನೇಶ್ವರಿ ಚವರಡ್ಡಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ಶ್ರೀತನು ಅಂಗಡಿ ಕಾರ್ಯಕ್ರಮ ನಿರೂಪಿಸಿದರು.