ಗದಗ/ ಲಕ್ಷ್ಮೇಶ್ವರ: ಸಾರಿಗೆ ಸಂಸ್ಥೆಯ ಬಸ್ ಗೆ ಮೊಟ್ಟೆ, ಸಗಣಿ, ಕಲುಷಿತ ಬಣ್ಣ ಎರಚಿದ ಪರಿಣಾಮ ಹಲವು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಲ್ಲಿ ಇಂದು ಮುಂಜಾನೆ ಜರುಗಿದೆ.
ಬಣ್ಣ ತಾಗಬಾರದು ಎಂದು ಬಸ್‌ನ ಕಿಟಕಿಯ ಗ್ಲಾಸ್‌ಗಳನ್ನು ಕ್ಲೋಸ್ ಮಾಡಿ ಕುಳಿತಿದ್ದ ವಿದ್ಯಾರ್ಥಿಗಳಿಗೆ ಇದರಿಂದಾಗಿ ಉಸಿರಾಟ ತೊಂದರೆಯಾಗಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರುವಂತಾಗಿದೆ.
ಯುವಕರ ತಂಡವೊಂದು ಹೋಳಿ ಹಬ್ಬದ ನಿಮಿತ್ತ ಬಸ್ ಗೆ ಬಣ್ಣ, ಸೆಗಣಿ ಎರಚಿ ಪುಂಡಾಟ ಮೆರೆದಿದ್ದಾರೆ. ಬಣ್ಣ ಬೀಳಬಾರದು ಎಂದು ಸ್ಟೂಡೆಂಟ್ಸ್ ಕಿಟಕಿ ಕ್ಲೋಸ್ ಮಾಡಿದ್ದರು. ಕಿಟಕಿ ಕ್ಲೋಸ್ ಆಗಿದ್ದಕ್ಕೆ ಉಸಿರಾಟದ ತೊಂದರೆಯಿಂದ ಹಲವು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು
ಉಸಿರಾಟದ ತೊಂದರೆಯಿಂದ ಎದೆ ನೋವು ಎಂದು ಕೆಲ ವಿದ್ಯಾರ್ಥಿನಿಯರು ಕಣ್ಣೀರು ಹಾಕಿದ್ದಾರೆ. ತಕ್ಷಣವೇ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ತಂಡದಿಂದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.