ಅಸುರೀ ಶಕ್ತಿಗಳ ಮೇಲೆ ದೈವೀ ಗುಣಗಳ ವಿಜಯದ ಸಂಕೇತವಾಗಿ ಪ್ರತಿವರ್ಷ ಹೋಳಿ ಹಬ್ಬ ಆಚರಿಸಲಾಗುತ್ತದೆ. ಹೋಳಿ ಹಬ್ಬದ ದಿನ ಕಟ್ಟಿಗೆ ಮತ್ತು ಕಾಮಣ್ಣ ಮತ್ತು ರತಿದೇವಿಯ ಗೊಂಬೆಯನ್ನು ದಹಿಸುವುದು ಪ್ರಚಲಿತವಾಗಿದೆ. ವಾಸ್ತವಿಕವಾಗಿ ನಮ್ಮಲ್ಲಿರುವ ಸಿಟ್ಟು, ತಿರಸ್ಕಾರ, ಅನೇಕ ಪ್ರಕಾರದ ಹಳೆಯ ಸ್ವಭಾವ, ಸಂಸ್ಕಾರಗಳನ್ನು ದಹಿಸಿದಾಗ ಹೋಳಿಯನ್ನು ಆಚರಿಸಿದಂತೆ.
ಹೋಳಿ ಹಬ್ಬ ಭಾರತ ದೇಶದ ಅನೇಕ ಪ್ರಾಂತಗಳಲ್ಲಿ ಮತ್ತು ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಮಾಘ ಮಾಸದ ಹುಣ್ಣಿಮೆಯ ದಿನ ಹೋಳಿ, ಶಿಮಗ, ಹೋಲಿ ಮತ್ತು ಪಂಚಮಿಯ ದಿನ ಬಣ್ಣದ ಹಬ್ಬ ಓಕುಳಿ ವೈವಿಧ್ಯ, ಬಣ್ಣಗಳಿಂದ ಗುಲಾಲದಿಂದ ಆಟ ಆಡುತ್ತಾರೆ. ನೇಪಾಳಿ, ಪಂಜಾಬಿ ಭಾಷೆಯಲ್ಲಿ `ಹೋಲಿ’ ಅಸ್ಸಾಂನಲ್ಲಿ `ಭಾಗವತ್’, ಒರಿಸ್ಸಾದಲ್ಲಿ ಬಂಗಾಳದಲ್ಲಿ `ವಸಂತೋತ್ಸವ’, ಎಂದು ಹೋಳಿ ಹಬ್ಬ ವಿಶೇಷವಾಗಿರುತ್ತದೆ.
ಕೃಷ್ಣ ಹುಟ್ಟಿದ ಸ್ಥಳದಲ್ಲಿ ಮಥುರಾ ಬೃಂದಾವನದಲ್ಲಿ 16 ದಿನಗಳವರೆಗೆ ಹೊಳಿ ವಿಶೇಷವಾಗಿರುತ್ತದೆ. ಬಾಂಗ್ಲಾದೇಶ್, ಪಾಕಿಸ್ತಾನ, ಸರಿನಾ, ಗಯಾನಾ, ಟ್ರೀನಿಡಾಡ್, ಟೊರೆಂಟೊ, ದಕ್ಷಿಣ ಆಫ್ರಿಕಾ, ಮಲೇಶಿಯಾ, ಆಮೇರಿಕಾಗಳಲ್ಲಿ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬವು ಯಾವುದೇ ಜಾತಿ-ಭೇದವಿಲ್ಲದೆ, ಸರ್ವರಲ್ಲಿ ಎಲ್ಲಾ ಮಾನವರಲ್ಲಿ ಜೀವನದ ಸಂತೋಷ-ಸುಖಗಳನ್ನು ಹಂಚುವ ಹಬ್ಬವಾಗಿದೆ.
ಶಿವ ಮತ್ತು ಕಾಮದೇವನ ಬಗ್ಗೆ ಒಂದು ಕಥೆ ಇದ್ದರೆ, ಮತ್ತೊಂದು ಕಥೆ ಶ್ರೀಕೃಷ್ಣ ಮತ್ತು ಪೂತನಿಯ ಬಗ್ಗೆ ಇದೆ. ಪ್ರಹ್ಲಾದ ಮತ್ತು ಹಿರಣ್ಯ ಕಶ್ಯಪು ಬಗ್ಗೆ ಮತ್ತೊಂದು ಕಥೆ ಇದೆ. ಕೃಷ್ಣ ರಾಧೆಯನ್ನು ಪ್ರೀತಿಸುವುದನ್ನು ಚಿತ್ರಿಸಲು ಮುಂದಾಗುತ್ತಾನೆ. ಅಲ್ಲಿನ ಗೋಪಿಯರು ಬಣ್ಣಿಸುತ್ತಾನೆ. ಆ ಸಮಯದಲ್ಲಿ ಗೋಪಿಯರು ಕೃಷ್ಣನಿಗೆ ಕೋಲಗಳಿಂದ ಹೊಡೆಯಲು ಬೆನ್ನಟ್ಟುತ್ತಾರೆ. ಉತ್ತರಪ್ರದೇಶದಲ್ಲಿ ದ್ವಾರಕಾ ಮತ್ತು ಮಧುರದಲ್ಲಿ ಹೋಳಿ ಆಚರಣೆಯ ವೇಳೆ ಈ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.
ಶೀತ ಋತುವಿನ ಅಂತ್ಯ ಮತ್ತು ವಸಂತ ಋತುವಿನ ಸ್ವಾಗತವು ಆ ದಿನದಿಂದ ಪ್ರಾರಂಭವಾಗುತ್ತದೆ. ಹವಾಮಾನದಲ್ಲಿ ಹಠಾತ್ ಬದಲಾವಣೆಯು ಚರ್ಮವನ್ನು ಕೇಳಿಸುತ್ತದೆ. ಆ ಸಮಯದಲ್ಲಿ ಬಣ್ಣಗಳನ್ನು ಎರಚುವುದರಿಂದ ಕಿರಿಕಿರಿ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಈ ವಿಚಾರಗಳು ಗಮನಕ್ಕಿರಲಿ.
1. ಯಾವುದೇ ಅಪರಿಚಿತ ವ್ಯಕ್ತಿಗಳ ಮೇಲೆ ಅವರ ಅಪ್ಪಣೆ ಇಲ್ಲದೆ ಬಣ್ಣ ಹಾಕುವುದು ಬೇಡ.
2. ರಾಸಾಯನಿಕ ಬಣ್ಣಗಳು, ಆಯಿಲ್ ಪೇಂಟ್ ಇರುವುದು ಅತ್ಯುತ್ತಮ. ಇದರಿಂದ ಶಾರೀರಿಕ ಹಾನಿ ಆಗಬಹುದು.
3. ಸಾಧ್ಯವಾದಷ್ಟು ನೈಸರ್ಗಿಕ ಬಣ್ಣ ಬೀಟ್ರೂಟ್, ಗುಲಾಲ್, ಅರಿಶಿಣ, ಪಾಲಕ್ ಸೊಪ್ಪು, ಮುಂತಾದ ಒಳಬಣ್ಣಗಳನ್ನು ಉಪಯೋಗಿಸಿ. ಏಕೆಂದರೆ ಕರ್ನಾಟಕದಲ್ಲಿ ನೀರಿನ ಬರಗಾಲ ಇದೆ.
4. ಎಸ್ಎಸ್ಎಲ್ಸಿ ಹಾಗೂ ಅನೇಕ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗದೆ ಇರಲಿ. ಹಲಿಗೆ ಬಾರಿಸುವುದು, ಕೂಗುವುದು ಕಡಿಮೆ ಇರಲಿ.
5. ಆವ್ಯಶಕ ಸರಕಾರಿ ಕಾಯಕಗಳಿಗೆ ಹೋಗುವವರಿಗೆ ಬಣ್ಣ ಹಾಕುವುದು ಬೇಡ.
– ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರೀಸ್ ಮೀಡಿಯಾ ವಿಂಗ್ಸ್.
Advertisement