ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಸದ್ಯ ಪರಭಾಷೆಯಲ್ಲೂ ತನ್ನ ಚಾಪನ್ನು ಮೂಡಿಸಿದೆ. ಸ್ಟಾರ್ ನಟ, ನಟಿಯರ ಸಿನಿಮಾಗಳಿಗೆ ಕೋಟ್ಯಾಂತರ ಬಂಡಾವಳ ಹೂಡುತ್ತಿದೆ. ಕನ್ನಡ ಚಿತ್ರರಂಗವನ್ನು ಪರಭಾಷಾ ಮಂದಿಯೂ ತಿರುಗಿ ನೋಡುವಂತೆ ಮಾಡಿದ್ದು ಇದೇ ಹೊಂಬಾಳೆ ಸಂಸ್ಥೆ. ಈಗಾಗಲೇ ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾಗಳನ್ನು ಮಾಡುತ್ತಿರುವ ಹೊಂಬಾಳೆ ಸಂಸ್ಥೆ ಇದೀಗ ಬಾಲಿವುಡ್ ಗೂ ಎಂಟ್ರಿಕೊಟ್ಟಿದೆ.
ಹೊಂಬಾಳೆ ಫಿಲಮ್ಸ್ ಬಾಲಿವುಡ್ ಸಿನಿಮಾ ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಸಾಕಷ್ಟು ಹಿಂದೆಯೇ ಕೇಳಿ ಬಂದಿತ್ತು. ಆದರೆ ಯಾವ ಸಿನಿಮಾ, ಹೀರೋ ಯಾರು ಎಂಬುದು ಮಾತ್ರ ರಿವೀಲ್ ಆಗಿರಲಿಲ್ಲ. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದ್ದು ಹೊಂಬಾಳೆ ಫಿಲ್ಮ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹೃತಿಕ್ ರೋಷನ್ ಸಿನಿಮಾಗೆ ಬಂಡವಾಳ ಹೂಡುತ್ತಿದೆ.
ಹೃತಿಕ್ ಅವರನ್ನು ಗ್ರೀಕ್ ಗಾಢ್ ಎಂದು ಕರೆಯುತ್ತಾರೆ. ಅವರು ಅನೇಕರ ಮನಗೆದ್ದಿದ್ದಾರೆ. ಹೃತಿಕ್ ರೋಷನ್ ಅವರು ಹೊಂಬಾಳೆ ಫಿಲಂಸ್ ಜೊತೆ ಕೈಜೋಡಿಸಿದ್ದಾರೆ. ನಾವು ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತೇವೆ ಎಂದು ಹೊಂಬಾಳೆ ಸಂಸ್ಥೆ ಅನೌನ್ಸ್ ಮಾಡಿದೆ. ಸದ್ಯದಲ್ಲೇ ಈ ಚಿತ್ರದ ನಿರ್ದೇಶಕರು, ತಾಂತ್ರಿಕ ವರ್ಗ. ಕಲಾವಿದರು ಸೇರಿದಂತೆ ಇನ್ನೂಳಿದ ಮಾಹಿತಿಯನ್ನು ನಿರ್ಮಾಣ ಸಂಸ್ಥೆ ತಿಳಿಸಲಿದೆ.