ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಷ್ಟರ್ ಒನ್ ಸಿನಿಮಾ ರಿಲೀಸ್ ಗೆ ಕೆಲ ದಿನಗಳು ಮಾತ್ರವೇ ಭಾಕಿ ಇದೆ. ಕನ್ನಡದ ಜೊತೆಗೆ ಪರಭಾಷೆಯ ಮಂದಿಯೂ ಸಿನಿಮಾ ನೋಡಲು ಕಾದು ಕೂತಿದ್ದಾರೆ. ಚಿತ್ರದ ಟ್ರೈಲರ್ ಸೆಪ್ಟೆಂಬರ್-22 ರಂದು ಮಧ್ಯಾಹ್ನ 12.45 ಕ್ಕೆ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ನಿರ್ಮಾಣ ಸಂಸ್ಥೆಯಾದ ಹೊಂಬಾಳ ಸಣ್ಣ ವಿಡಿಯೋ ವೊಂದನ್ನು ಹಂಚಿಕೊಂಡಿದೆ.
ಹೊಂಬಾಳೆ ಸಂಸ್ಥೆ ತನ್ನ ತನ್ನ ಅಧಿಕೃತ ಪೇಜ್ ನಲ್ಲಿ ಕಾಂತಾರ ಸಿನಿಮಾದ ವಿಡಿಯೋ ಹಂಚಿಕೊಂಡಿದೆ. ರಿಷಬ್ ಶೆಟ್ಟಿ ಮುನ್ನುಗ್ಗುವ ದೃಶ್ಯವೂ ಇದ್ದು, ದೈವ ನರ್ತಕನ ರೂಪದಲ್ಲಿ ರಿಷಬ್ ಶೆಟ್ಟಿ ನಟಿಸಿರೋ ದೃಶ್ಯ ವಿಡಿಯೋದಲ್ಲಿದೆ.
ಹೌದು, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಸಿನಿಮಾ ಕಾಂತಾರ ಚಾಪ್ಟರ್ 1 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿ ಜಗತ್ತಿನಾದ್ಯಂತೆ ಜನಮೆಚ್ಚುಗೆ ಗಳಿಸಿರುವ ಹಿನ್ನೆಲೆಯಲ್ಲಿ ಇದೀಗ ಕಾಂತಾರ ಪ್ರೀಕ್ವೆಲ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಅಕ್ಟೋಬರ್ 2 ರಂದು ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆ ಆಗಿದೆ.
ಕಾಂತಾರ 1 ಬಿಡುಗಡೆಗೆ ಮೊದಲೇ 200 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿಕೊಂಡಿದೆ. ಓಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ 120 ಕೋಟಿ ರೂಪಾಯಿ ನೀಡಿ ಪಡೆದುಕೊಂಡಿದ್ದು, ಜೀಟಿವಿಯವರು 80 ಕೋಟಿ ರೂಪಾಯಿ ನೀಡಿ ಎಲ್ಲಾ ಭಾರತೀಯ ಭಾಷೆಯ ಸ್ಯಾಟಲೈಟ್ ಹಕ್ಕನ್ನು ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಚಿತ್ರದ ಆಡಿಯೋ ಹಕ್ಕು 30 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಿಲ್ಲ.