ಉತ್ತಮ ಆರೋಗ್ಯಕ್ಕೆ ಮನೆ ಆಹಾರ ಅವಶ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಉತ್ತಮ ಆರೋಗ್ಯಕ್ಕೆ ಮನೆಯ ಆಹಾರ ತುಂಬಾ ಅವಶ್ಯಕ ಎಂದು ಧಾರವಾಡ ಬಸವಾನಂದ ಮಾಹಾಸ್ವಾಮಿಗಳು ಹೇಳಿದರು.

Advertisement

ಅವರು ಪಟ್ಟಣದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅನುಭಾವ ಗೋಷ್ಠಿಯಲ್ಲಿ ಉಪನ್ಯಾಸ ನೀಡಿ, ಆಧುನಿಕತೆ ಬೆಳೆದಂತೆಲ್ಲಾ ಇಂದು ಆಹಾರ ಪದ್ಧತಿ ಬದಲಾಗುತ್ತಿದ್ದು, ಇದರಿಂದ ನಿತ್ಯ ಹತ್ತು ಹಲವಾರು ರೋಗಗಳಿಂದ ಬಳಲುತ್ತಿದ್ದೇವೆ. ನಾವು ಉತ್ತಮ ಆರೋಗ್ಯ ಹೊಂದಲು ಸಿರಿಧಾನ್ಯಗಳನ್ನು ನಿತ್ಯ ಜೀವನದಲ್ಲಿ ಬಳಕೆ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.

ಗದಗ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಆಧುನಿಕತೆ ಬೆಳೆದಂತೆ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಸಂಸ್ಕಾರ ಮರೆಯುತ್ತಿದ್ದೇವೆ. ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಳಗುಂದ ಸಿದ್ದೇಶ್ವರ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇಂತಹ ದೇವಸ್ಥಾನದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಅನುಭಾವ ಗೋಷ್ಠಿಯ ಸಾನ್ನಿಧ್ಯವನ್ನು ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಮಾಹಾಸ್ವಾಮೀಜಿ, ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಪಾಲ್ಗೊಂಡಿದ್ದರು. ಧಾರವಾಡದ ಬಸವಾನಂದ ಮಾಹಾಸ್ವಾಮಿಗಳು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಎಸ್.ಎಂ. ನೀಲಗುಂದ ವಹಿಸಿದ್ದರೆ, ಕಾರ್ಯಕ್ರಮವನ್ನು ಗೌರಮ್ಮಾ ಬಡ್ನಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಶೀನಾಥ ಮರಿದೇವರಮಠ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ರಾಮಣ್ಣಾ ಕಮಾಜಿ, ಅಶೋಕ ಸೋನಗೋಜಿ, ನಾಗರಾಜ ದೇಶಪಾಂಡೆ, ಇಮ್ಮಣ್ಣಾ ಚವಳಿಕಾಯಿ, ಫಕ್ಕೀರಯ್ಯ ಅಮೋಘಿಮಠ, ಮಾಹಾಂತಪ್ಪ ನೀಲಗುಂದ, ಮಾಹಾದೇವಪ್ಪ ಹುಬ್ಬಳ್ಳಿ, ಚಂಬಣ್ಣಾ ಲಕ್ಷ್ಮೇಶ್ವರ, ಗುರಣ್ಣಾ ಜವಳಿಶೇಟ್ರ, ಹೊನ್ನಪ್ಪ ಜೋಗಿ, ಮರಿಯಪ್ಪ ನಡಗೇರಿ, ಎ.ಡಿ. ಮುಜಾವಾರ, ಎಂ.ಎಂ. ಜಮಾಲಸಾಬಮವರ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here