ಬೆಂಗಳೂರು: – ಜಾಗದ ವಿಚಾರಕ್ಕೆ ಪುಂಡರು ಮನೆ ಮಾಲೀಕನಿಗೆ ಥಳಿಸಿದ್ದು, ಬಳಿಕ ಗೋಡೆ ಧ್ವಂಸ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
Advertisement
ಈ ಮೂಲಕ ನಗರದಲ್ಲಿ ಪುಂಡರ ಹಾವಳಿಗೆ ಮಿತಿ ಇಲ್ವಾ ಎಂಬ ಪ್ರಶ್ನೆ ಎದ್ದಿದೆ. ವೈಟ್ಫೀಲ್ಡ್ನಲ್ಲಿ ಈ ಘಟನೆ ಜರುಗಿದ್ದು, 50ಕ್ಕೂ ಹೆಚ್ಚು ಪುಂಡರಿಂದ ಜಾಗದ ಮಾಲೀಕ ವಿಶಾಲ್ ಬಾಳಿಗ ಮನೆ ಮೇಲೆ ದಾಳಿ ನಡೆದಿದೆ.
ಗೋಪಾಲ್ ಜವಹಾರ್ ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಮನೆ ಮಾಲೀಕರ ದೂರಿನನ್ವಯ ಎಫ್ಐಆರ್ ದಾಖಲಾಗಿದೆ. 50ಕ್ಕೂ ಹೆಚ್ಚು ಪುಂಡರು ಬೆಳಗ್ಗೆ 9:30ರ ಹೊತ್ತಿಗೆ ಗೋಪಾಲ್ ಎಂಬವರ ಮನೆಗೆ ಏಕಾಏಕಿ ನುಗ್ಗಿ ದಾಂಧಲೆ ಮಾಡಿದ್ದಾರೆ.
2 ಜೆಸಿಬಿ ಬಳಸಿ ಮನೆಯ ಗೋಡೆಗೆ ಗುದ್ದಿಸಿ ಧ್ವಂಸ ಮಾಡಿದ್ದಾರೆ. ಜಾಗದ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.