ತವರಿಗೆ ಹೋದ ಹೆಂಡ್ತಿ: ಖುಷಿಯಲ್ಲಿ ಆಟೋ ಡ್ರೈವರ್ ಮಾಡಿದ್ದೇನು ಗೊತ್ತಾ?

0
Spread the love

ಬೆಂಗಳೂರು:- ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಇಲ್ಲೋರ್ವ ಆಟೋ ಚಾಲಕ, ತನ್ನ ಪ್ರಯಾಣಿಕರಿಗೆ ಬಿಸ್ಕತ್ ಹಂಚಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

Advertisement

ಹೌದು, ತನ್ನ ಹೆಂಡತಿ ಆಕೆಯ ಅಮ್ಮನ ಮನೆಗೆ ಹೋದ ಖುಷಿ ತಾಳಲಾರದೆ ಆಕೆಯ ಗಂಡ ಊರ ತುಂಬೆಲ್ಲ ಈ ವಿಚಾರವನ್ನು ಢಂಗುರ ಸಾರಿದ್ದಾನೆ. ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್​ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ ವಿತರಿಸಿದ್ದಾನೆ.

ವಿಡಿಯೋವನ್ನು ಆತನ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ “ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ” ಎಂದು ಬರೆಯಲಾಗಿದೆ.

ನೆಟಿಜನ್‌ಗಳು ಇದನ್ನು ‘ಸ್ವಾತಂತ್ರ್ಯ’ ಎಂದು ಕರೆದಿದ್ದಾರೆ. ಆ ವ್ಯಕ್ತಿ ತಮ್ಮ ಆಟೋದಲ್ಲಿ ಪ್ರಯಾಣಿಸುವವರಿಗೆ ಬ್ರಿಟಾನಿಯಾ ಮಿಲ್ಕ್ ಬಿಕಿಸ್‌ಗಳನ್ನು ವಿತರಿಸಿದ್ದಾನೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here