ಬೆಂಗಳೂರು :- ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಯೋಜನೆಯೂ ಒಂದು. ಇನ್ನೂ ಈ ಯೋಜನೆ ಅನುಸಾರ ಗ್ರಾಹಕರಿಗೆ ಉಚಿತ ಕರೆಂಟ್ ನೀಡಲಾಗುತ್ತಿದೆ. ಆದರೆ ಯೋಜನೆಯ ಹಣ ಸರ್ಕಾರ ಪಾವತಿಸದಿದ್ದರೆ ಗ್ರಾಹಕರಿಂದ ವಸೂಲಿ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹೌದು, ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸದ್ಯ ಟೆನ್ಶನ್ ಶುರುವಾಗಿದೆ. ಸರ್ಕಾರ ಯೋಜನೆಗೆ ಮುಂಗಡ ಸಬ್ಸಿಡಿ ಬಿಡುಗಡೆ ಮಾಡದಿದ್ದರೆ ಗ್ರಾಹಕರಿಂದಲೇ ವಸೂಲಿ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.
ಈ ಮಧ್ಯೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಹೇಳಿಕೆ ನೀಡಿದ್ದು, ಸರ್ಕಾರ ನಮಗೆ ಪ್ರತಿ ತಿಂಗಳೂ ಮುಂಗಡ ಹಣ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗ್ರಾಹಕರು ಬಿಲ್ ಪಾವತಿಸಬೇಕಾದ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಮುಂಗಡ ಅನುದಾನ ನಮಗೆ ನೀಡಲಾಗಿದೆ. ಈ ಯೋಜನೆ ಸಂಬಂಧ ನಮ್ಮಲ್ಲಿ ಮುಂಗಡ 50 ಕೋಟಿ ರೂ. ಇದೆ. ಸರ್ಕಾರ ಮುಂಗಡ ಹಣ ಕೊಡದೇ ಇದ್ದಲ್ಲಿ ಗ್ರಾಹಕರು ಕೊಡಬೇಕು. ಆದರೆ ಸರ್ಕಾರ ನಮಗೆ ಪ್ರತಿ ತಿಂಗಳೂ ಮುಂಗಡ ಹಣ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗ್ರಾಹಕರು ಬಿಲ್ ಪಾವತಿಸಬೇಕಾದ ಪ್ರಮೇಯ ಬರುವುದಿಲ್ಲ. ರಾಜ್ಯ ಸರ್ಕಾರ ಉಚಿತ ಯೋಜನೆಗಳ ಸಬ್ಸಿಡಿ ಹಣ ಕೊಡದೇ ಇದ್ದಲ್ಲಿ, ಕೆಇಆರ್‌ಸಿ ನಿಯಮಗಳ ಪ್ರಕಾರ ನಾವು ಹಣ ವಸೂಲಿ ಮಾಡುತ್ತೇವೆ ಎಂದು ಹೇಳಿದ್ದಾರೆ.