HomeGadag Newsನಾಗಾವಿ ಕಲಾವಿದರ, ಸಾಧಕರ ತವರೂರು: ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್.ಪಾಟೀಲ

ನಾಗಾವಿ ಕಲಾವಿದರ, ಸಾಧಕರ ತವರೂರು: ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್.ಪಾಟೀಲ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಹರ್ಷಿ ನಾಗಾರ್ಜುನರಿಂದ ಹೆಸರು ಪಡೆದಿರುವ ನಾಗಾವಿ ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ವೀರಗಾಸೆ, ಡೊಳ್ಳಿನ ಕುಣಿತ, ಭಜನೆ, ಪುರಾಣ ಪ್ರವಚನಗಳು ಈ ಗ್ರಾಮದಲ್ಲಿ ಮೇಳೈಸಿವೆ. ಈ ಪುಣ್ಯಭೂಮಿಯು ಕಲಾವಿದರ, ಸಾಧಕರ ತವರೂರಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.

ನಾಗಾವಿ ಗ್ರಾಮದಲ್ಲಿ ಶ್ರೀಯಲ್ಲಮ್ಮದೇವಿಯ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ, ಶ್ರೀಮಾರುತಿ ನಾಟ್ಯ ಸಂಘದವರು ಏರ್ಪಡಿಸಿದ್ದ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಮುಖಂಡರಾದ ಬಿ.ಬಿ. ಅಸೂಟಿ ಮಾತನಾಡಿ, ಕಲೆ ಎಂಬುದು ಯಾರ ಸ್ವತ್ತೂ ಅಲ್ಲ. ಅದನ್ನು ತೋರಿಸಲು ಮುಂದೆ ಬರಬೇಕು. ಅದನ್ನು ನಾಗಾವಿ ಗ್ರಾಮದಲ್ಲಿ ತೋರ್ಪಡಿಸುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ ಮಾಜಿ ಅಧ್ಯಕ್ಷ ಬಿ.ಆರ್. ದೇವರೆಡ್ಡಿ ಮಾತನಾಡಿ, ಪ್ರತಿಯೊಂದು ನಾಟಕವು ಮನುಷ್ಯನ ಜೀವನದಲ್ಲಿ ನಡೆಯುವ ಘಟನೆಗಳೇ ಇರುತ್ತವೆ. ನಾಟಕದಲ್ಲಿ ಬರುವ ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದ್ದನ್ನು ಬಿಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕೊಟ್ಟೂರುಸ್ವಾಮಿ ಬೂದಗುಂಪ ಶಾಖಾ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ರಂಗಭೂಮಿ ಅಳಿವಿನ ಅಂಚಿನಲ್ಲಿದೆ. ಅದರೆ, ನಾಗಾವಿ ಗ್ರಾಮದಲ್ಲಿ ಕಲೆ, ಕಲಾ ಆರಾಧಕರು ಇದ್ದಾರೆ. ಕಲೆಯನ್ನು ಮುಂದುರೆಸುವ ಶಕ್ತಿ ಇಲ್ಲಿದೆ ಎಂದರು.

ವೇ.ಮೂ. ಕರಬಸಯ್ಯ ಹಿರೇಮಠ ಸಮ್ಮುಖ ವಹಿಸಿದ್ದರು. ಕೆ.ಎಂ.ಎಫ್ ನಿರ್ದೇಶಕರಾದ ಎಚ್.ಜಿ. ಹಿರೇಗೌಡ್ರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಮುಖಂಡರಾದ ಐ.ಬಿ. ಬಿಂಕದಕಟ್ಟಿ, ಡಿ.ಎಸ್. ಶಿದ್ನೆಕೊಪ್ಪ, ಜಿ.ಬಿ. ಕುಷ್ಟರೆಡ್ಡಿ, ಕೆ.ಎಂ. ಗೋವಿಂದರೆಡ್ಡಿ, ಎ.ಆರ್. ಮರಿಹನಮರೆಡ್ಡಿ, ಜಿ.ಎಚ್. ಮೊರಬರೆಡ್ಡಿ, ಎಫ್.ಎಚ್. ಮರಡ್ಡಿ, ದಯಾನಂದ ಪವಾರ, ಅಜ್ಜಣ್ಣ ಹುಗ್ಗೇನವರ, ಎಂ.ಬಿ. ಮರಡ್ಡಿ, ಮಂಜಪ್ಪ ಹವಳಪ್ಪನವರ, ಸತ್ಯಪ್ಪ ತಾಮ್ರಗುಂಡಿ, ಮೃತ್ಯಂಜಯಪ್ಪ ಹಟ್ಟಿ, ಗೋವಿಂದಗೌಡ ಭರಮಗೌಡ್ರ, ಹನಮರೆಡ್ಡಿ ಸಿದ್ನೆಕೊಪ್ಪ, ಗ್ರಾ.ಪಂ ಅಧ್ಯಕ್ಷ ಸುರೇಶ ಪವಾರ, ಉಪಾಧ್ಯಕ್ಷರಾದ ಸುಮಾ ತಳವಾರ, ಸದಸ್ಯರಾದ ಯು.ಬಿ. ಶಿಗ್ಲಿ, ಎಚ್.ಎಚ್. ನದಾಫ್, ಪಾರವ್ವ ಗೊರವರ, ಎಸ್.ಕೆ. ಮೊರಬರೆಡ್ಡಿ, ಎಚ್.ಎಂ. ಸಿದ್ನೆಕೊಪ್ಪ, ಸೋಮಪ್ಪ ಪವಾರ, ಕುಬೇರಪ್ಪ ರಾಠೋಡ, ಗೌರಿ ತೋಟದ ಮುಂತಾದವರು ಉಪಸ್ಥಿತರಿದ್ದರು.

ಎಸ್.ಎಸ್. ತಳವಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ. ಸಿದ್ನೇಕೊಪ್ಪ ವಂದಿಸಿದರು.

ಕಲೆ ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ನಾಗಾವಿ ಗ್ರಾಮದಲ್ಲಿ ಪ್ರತಿವರ್ಷ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ನಾಟಕದ ಕಥೆ ಅಥವಾ ಸಾರಾಂಶವನ್ನು ನೋಡಿದಾಗ, ಮನೆಯಲ್ಲಿ ಸಹೋದರರು ಯಾವ ರೀತಿ ನಡೆದುಕೊಳ್ಳಬೇಕು ಎಂಬುದು ತಿಳಿಯುತ್ತದೆ. ಪ್ರತಿ ವರ್ಷ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ನಾಟಕ ಆಡದಿದ್ದರೆ, ಅದು ನಾಗಾವಿಯ ಜಾತ್ರೆ ಅನಿಸುವದಿಲ.್ಲ ಕಷ್ಟ-ಸುಖ ಏನೇ ಇದ್ದರೂ, ಇಲ್ಲಿಯ ಕಲಾವಿದರು ಒಗ್ಗೂಡಿಕೊಂಡು ಪ್ರತಿ ವರ್ಷ ನಾಟಕವನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ ಎಂದು ಕೃಷ್ಣಗೌಡ ಎಚ್.ಪಾಟೀಲ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!