ಹನಿಟ್ರ‍್ಯಾಪ್ ಆರೋಪ ಮುಂದೆಯೂ ಬರಬಹುದು, ಇದು ನಿಲ್ಲಲ್ಲ- ಸಚಿವ ರಾಜಣ್ಣ!

0
Spread the love

ಕೋಲಾರ: ಹನಿಟ್ರ‍್ಯಾಪ್ ಕುರಿತು ಸಹಕಾರ ಸಚಿವ ರಾಜಣ್ಣ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹನಿಟ್ರ‍್ಯಾಪ್ ಆರೋಪ ಮುಂದೆಯೂ ಬರಬಹುದು. ಹನಿಟ್ರ‍್ಯಾಪ್ ಕುರಿತು ವಿಧಾನಸಭೆಯಲ್ಲಿ ಹೇಳುವಷ್ಟು ಹೇಳಿದ್ದೇನೆ. ಅದನ್ನು ಹೊರತು ಪಡಿಸಿ ಹೇಳುವಷ್ಟು ಏನು ಇಲ್ಲ. ಈ ಆರೋಪ ಒಂದಲ್ಲ, ಕಡೆಯದೂ ಅಲ್ಲ, ಮುಂದೆಯೂ ಬರಬಹುದು ಎಂದು ಹೇಳಿದರು.

Advertisement

ಹನಿಟ್ರ‍್ಯಾಪ್ ತನಿಖೆ ಕುರಿತು ಸಿಎಂ ಹಾಗೂ ಗೃಹಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು. ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರತಿದಿನ ಅವರ ಜೊತೆ ಮಾತನಾಡುವೆ ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ಶಾಸಕರ ಅಮಾನತು ವಿಷಯದಲ್ಲಿ ನಾನಾಗಿದಿದ್ದರೆ ಇನ್ನೂ ಮುಂಚಿತವಾಗಿ ಈ ಕೆಲಸ ಮಾಡುತ್ತಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಕಪ್ಪು ಚುಕ್ಕೆ, ಜನಪರ ವಿಚಾರವನ್ನಿಟ್ಟುಕೊಂಡು ಶಾಸಕರು ಚರ್ಚೆ ಮಾಡುತ್ತಿಲ್ಲ. ಬಜೆಟ್ ಬಗ್ಗೆ 80 ಶಾಸಕರು ಪ್ರಸ್ತಾಪ ಮಾಡಿದ್ದಾರೆ, ಅದಕ್ಕೆ ಸಿಎಂ ಉತ್ತರ ಕೊಡಬೇಕಾಗಿದೆ. ಬಜೆಟ್ ಮೇಲಿನ ಸಿಎಂ ಉತ್ತರಕ್ಕೆ ಅಡಚಣೆ ಮಾಡಲು ಈ ರೀತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ಕಪ್ಪುಚುಕ್ಕೆ. ನಾನು ಸ್ಪೀಕರ್ ಆಗಿದ್ದರೆ ಮೊದಲೇ ಸಸ್ಪೆಂಡ್ ಮಾಡುತ್ತಿದೆ ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here