HomeIndia Newsಹನಿಟ್ರ‍್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡಿದೆ: ಸಂಸದ ಬೊಮ್ಮಾಯಿ

ಹನಿಟ್ರ‍್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡಿದೆ: ಸಂಸದ ಬೊಮ್ಮಾಯಿ

For Dai;y Updates Join Our whatsapp Group

Spread the love

ನವದೆಹಲಿ: ಹನಿಟ್ರ‍್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡಿದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಹನಿಟ್ರ‍್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡಿದೆ.

ಇದನ್ನು ಬಹಳ ಸೂಕ್ಷ್ಮವಾಗಿ ಹೇಳುತ್ತಿದ್ದೇನೆ. ಕಾಂಗ್ರೆಸ್‌ನ ಅಧಿಕಾರದ ಲಾಲಸ್ಯ ನೈತಿಕತೆಯನ್ನು ಅಧೋಗತಿಗೆ ತೆಗೆದುಕೊಂಡಿದೆ. ಒಂದು ಹಗರಣದಿಂದ ಮತ್ತೊಂದು ಹಗರಣ ಆಗುತ್ತಿದೆ. ಎರಡು ವರ್ಷದಲ್ಲಿ ಹತ್ತು ಹಗರಣ ಆಚೆ ಬಂದಿದೆ. ಕೈ ಹಾಕಿದ ಕಡೆಯಲ್ಲ ಹಗರಣ ಬರುತ್ತಿದೆ ಎಂದರು.

ವಿಧಾನಸಭೆಯಲ್ಲಿ ನೈತಿಕ ಅಧಪತನ ನೋಡಿದ್ದೇವೆ. ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ. ಸರ್ಕಾರ ಆರ್ಥಿಕವಾಗಿ, ನೈತಿಕವಾಗಿ ದಿವಾಳಿಯಾಗಿದೆ. ಕ್ಯಾಬಿನೆಟ್ ಸಚಿವರು ಹಬಿಟ್ರ‍್ಯಾಪ್ ಆಗುತ್ತಿದೆ ಎಂದು ಹೇಳುವ ಪರಿಸ್ಥಿತಿ ಬಂದಿದೆ.

ಹದಿನೈದು ದಿನದಿಂದ ವಿಧಾನಸೌಧದ ಮೊಗಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಇಂತಹ ಕ್ಯಾಬಿನೆಟ್‌ಗೆ ಏನು ಹೇಳಬೇಕು. ಇದು ನೈತಿಕತೆ ಕಳೆದುಕೊಂಡ ಕ್ರಿಮಿನಲ್ ಕ್ಯಾಬಿನೆಟ್. ಸಿಎಂ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!