ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಸೌಂದರ್ಯ ಲಹರಿ ಬಳಗದ ವತಿಯಿಂದ ಶಂಕರಾಚಾರ್ಯರ ವಿರಚಿತ ಕಲ್ಯಾಣ ದೃಷ್ಟಿಸ್ತವ, ಶಿವಪಂಚಾಕ್ಷರ ಮತ್ತು ಲಕ್ಷ್ಮೀನರಸಿಂಹ ಸ್ತೋತ್ರ ಪಾರಾಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತಾತಾನಗೌಡ ಪಾಟೀಲ, ಉಪಾಧ್ಯಕ್ಷ ರಾಜಣ್ಣ ಎಸ್.ಗುಡಿಮನಿ, ಕಾರ್ಯದರ್ಶಿ ಅಶೋಕ ಪಾಟೀಲ, ಸೋಮಣ್ಣ ಜಾರಿ, ತೆರಿಗೆ ಸಲಹೆಗಾರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದನಗೌಡ ಕಲ್ಲನಗೌಡರ, ಸಾಧಕರಾದ ಲಿಂಗರಾಜ ಆಮಾತ್ಯ, ಪ್ರಕಾಶ ಅಕ್ಕಿ, ಬಸವರಾಜ ಕರಮುಡಿ, ಹೇಮಾದ್ರಿ ಇವರನ್ನು ಸನ್ಮಾನಿಸಲಾಯಿತು.
ಸೌಂದರ್ಯ ಲಹರಿ ಬಳಗದ ಅಧ್ಯಕ್ಷೆ ರೇಣುಕಾ ಆಮಾತ್ಯ, ಉಪಾಧ್ಯಕ್ಷ ರಾಜು ಗುಡಿಮನಿ ಸನ್ಮಾನ ಸ್ವೀಕರಿಸಿದ ತಾತಾನಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಲಿತಾ ಭರಮಗೌಡ್ರ, ಶೋಭಾ ಕಲ್ಲನಗೌಡ್ರ, ಗೀತಾ, ವಿದ್ಯಾ, ಲಾವಣ್ಯಾ, ಯಶೋಧಾ, ಶಾರದಾ, ಶೋಭಾ, ಪವಿತ್ರ, ವಿಜ್ಜು, ಸುಜಾತಾ, ಸುವರ್ಣ ಮದರಿಮಠ, ಜ್ಯೋತಿ ದಾನಪ್ಪಗೌಡ್ರ, ಜಯಶ್ರೀ ಉಗಲಾಟದ, ಸುನಂದಾ, ರಾಜಕ್ಕ ಶೆಟ್ಟರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸ್ವ-ರಚಿತ ಕವನಗಳನ್ನು ಓದಿದರು. ಶಿವಲೀಲಾ ಅಕ್ಕಿ ನಿರೂಪಿಸಿದರು. ಜಯಶ್ರೀ ಪಾಟೀಲ ವಂದಿಸಿದರು.