ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕನ್ನಡ ಎಂ.ಎನಲ್ಲಿ ಬಂಗಾರದ ಪದಕ ಪಡೆದಿರುವ ಪೂಜಾ ವಿನಾಯಕ ಗ್ರಾಮಪುರೋಹಿತ ಅವರಿಗೆ ಇಲ್ಲಿನ ಬ್ರಹ್ಮ ಸಮಾಜದ ವತಿಯಿಂದ ಶ್ರೀ ದತ್ತ ಭಕ್ತ ಮಂಡಳಿಯ ಆಶ್ರಯದಲ್ಲಿ ಸನ್ಮಾನವನ್ನು ಅಕ್ಟೋಬರ್ 6ರ ಸಂಜೆ 4.30ಕ್ಕೆ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ರಘುನಾಥ ಕೊಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ನರೇಗಲ್ಲದ ಖ್ಯಾತ ವೈದ್ಯರಾದ ಡಾ. ಜಿ.ಕೆ. ಕಾಳೆಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಷಿ, ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ, ರೋಣ ತಾಲೂಕಾಧ್ಯಕ್ಷ ಗುರುರಾಜ ಕುಲಕರ್ಣಿ ಮತ್ತು ಗಜೇಂದ್ರಗಡ ತಾಲೂಕಾಧ್ಯಕ್ಷ ರಾಮಣ್ಣ ಗಾಡಗೋಳಿ, ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಆಗಮಿಸಲಿದ್ದು, ಬ್ರಹ್ಮ ಸಮಾಜದ ಬಾಂಧವರು ಸಮಾರಂಭದಲ್ಲಿ ಪಾಲ್ಗೊಳ್ಳಲು ಕೊಂಡಿ ವಿನಂತಿಸಿದ್ದಾರೆ.