ವಿಜಯಸಾಕ್ಷಿ ಸುದ್ದಿ, ಗದಗ : ಸಾಧನೆ ಮಾಡಲು ಮಕ್ಕಳಲ್ಲಿ ಛಲ ಮತ್ತು ಆತ್ಮಸ್ಥೆರ್ಯ ಇರಬೇಕು. ವಿದ್ಯೆ ಪಡೆಯಲು ಬಡತನ ಎಂದೂ ಅಡ್ಡಿಯಾಗಲಾರದು. ಚೆನ್ನಾಗಿ ಓದಿ, ಮಾನವೀಯ ಮೌಲ್ಯದೊಂದಿಗೆ ಭಾವೀ ಜೀವನ ರೂಪಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದರೊಂದಿಗೆ ಹೆತ್ತ ತಂದೆ-ತಾಯಿಯರಿಗೆ ಕೀರ್ತಿ ತರಬೇಕು ಎಂದು ಸೃಷ್ಟಿ ಮಹಿಳಾ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷೆ ಚೇತನಾ ಸೀತಾರಹಳ್ಳಿ ಕರೆ ನೀಡಿದರು.
ಸೃಷ್ಟಿ ಮಹಿಳಾ ವಿವಿಧೋದ್ದೇಶಗಳ ಸಂಘದ ಕಚೇರಿಯಲ್ಲಿ ಅವರು ಕಳೆದ ಎಪ್ರೀಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿದರು.
ಈ ವೇಳೆ ಭೂಮಿಕಾ ಪ್ರಶಾಂತ ಬಾಗಲಕೋಟ ಹಾಗೂ ವಿದ್ಯಾ ಬಸವರಾಜ ಚಲವಾದಿ ಇವರನ್ನು ಸನ್ಮಾನಿಸಿಲಾಗಿಯಿತು. ಸಂಘದ ಪದಾಧಿಕಾರಿಗಳಾದ ಸುಧಾ ಎಸ್.ಕಟ್ಟಿಮನಿ, ಶೋಭಾ ಸಿ.ಗಡಾದ, ರೇಣುಕಾ ಆರ್.ಗಡಾದ, ರೇಖಾ ಎಂ.ಬಾಗಲಕೋಟ, ಹನಮಕ್ಕ ವಾಯ್.ಗೋಕಾವಿ, ಅನಿತಾ ಆರ್.ಗೋಕಾಕ, ಶೋಭಾ ಗೋಕಾಕ, ಉಷಾ ಮಾನಪಟಿ ಉಪಸ್ಥಿತರಿದ್ದರು.