ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಸ್ಥಳೀಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರಿಗೆ ಪಟ್ಟಣದ ಸರ್ಫರಾಜ ಅಹ್ಮದ ಖಾಜಿ ಅವರು ಮುಳಗುಂದದ ಹಾಶ್ಮೀ ಶಾದಿಹಾಲ್‌ನಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಫರಾಜ ಖಾಜಿ, ಮತದಾರರು ತಮ್ಮ ಮೇಲೆ ವಿಶ್ವಾಸವಿಟ್ಟು ಸಮುದಾಯದ ಏಳಿಗೆ ಮತ್ತು ಅಭಿವೃದ್ಧಿಗಾಗಿ ಆಯ್ಕೆ ಮಾಡಿ ಕಳಿಸಿದ್ದಾರೆ. ಜವಾಬ್ದಾರಿಯನ್ನರಿತು ತಮ್ಮ ತನು-ಮನ-ಧನದಿಂದ ಸೇವೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಎಂ.ಎ. ಖಾಜಿ, ತಾಜುದ್ದೀನ ಎಂ.ಕಿಂಡ್ರಿ, ಎ.ಡಿ. ಮುಜಾವರ, ಹೈದರ ಖವಾಸ, ಮುನ್ನಾ ಢಾಲಾಯತ, ದಾವಲಸಾಬ ಲಕ್ಷ್ಮೇಶ್ವರ, ರಫೀಕ ದಲೀಲ, ಲಾಲಷಾಪೀರ ಮಕಾಂದಾರ, ಅಲ್ಲಾಬಕ್ಷಿ ಹೊಂಬಳ, ದಾವೂದ್ ಜಮಾಲ್, ರಾಜೇಸಾಬ ಸೈಯದಬಡೆ, ಇಸಾಕ ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ದಾವಲಸಾಬ ಕುರ್ತಕೋಟಿ, ಮಾಬುಲಿ ದುರ್ಗಿಗುಡಿ, ನಜೀರ ಢಾಲಾಯತ, ಮುನ್ನಾ ದುರ್ಗಿಗುಡಿ ಇತರರು ಉಪಸ್ಥಿತರಿದ್ದರು.