ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಎ.ಪಿ.ಎಂ.ಸಿ. ವಾಕಿಂಗ್ ಮಿತ್ರ ಮಂಡಳಿ ವತಿಯಿಂದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 2023-24ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ತಾತನಗೌಡ ಪಾಟೀಲ, ಕಾರ್ಯದರ್ಶಿಗಳಾಗಿ ಆಯ್ಕೆಯಾದ ಅಶೋಕ ಪಾಟೀಲ ಹಾಗೂ ಕೋಶಾಧ್ಯಕ್ಷರಾಗಿ ಆಯ್ಕೆಯಾದ ಸಂಜಯ ಬಾಗಮಾರ ಇವರುಗಳಿಗೆ ಹುಲಕೋಟಿಯ ಬಳ್ಳಾರಿಯವರ ಫಾರ್ಮ್ ಹೌಸ್ನಲ್ಲಿ ಸನ್ಮಾನಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷ ಚನ್ನವೀರಪ್ಪ ಹುಣಸಿಕಟ್ಟಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾಗಿರುವ ತಾತನಗೌಡ ಪಾಟೀಲರ ಅವಧಿಯಲ್ಲಿ ಗದಗ ಎ.ಪಿ.ಎಂ.ಸಿ. ವಾಕಿಂಗ್ ಮಿತ್ರ ಮಂಡಳಿ ವತಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಮುರುಗೇಶ ಬಡ್ನಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾತನಗೌಡ ಪಾಟೀಲರು ನಮ್ಮ ದಲಾಲ ವರ್ತಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಅನೇಕ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವುದರಿಂದ ಈ ವರ್ಷ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯನ್ನು ಯಶಸ್ಸಿನತ್ತ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಮಧುಸೂಧನ ಪುಣೇಕರ, ದಲಾಲ ವರ್ತಕರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಬೇಲೇರಿ, ರಸಗೊಬ್ಬರ ವ್ಯಾಪಾರಸ್ಥ ಸಿದ್ಧಣ್ಣ ಹಲವಾಗಲಿ, ಖ್ಯಾತ ರಫ್ತುದಾರರಾದ ಶರಣು ಗದಗ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಆತಿಥ್ಯವನ್ನು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಮೇಶ ಶಿಗ್ಲಿಯವರು ವಹಿಸಿಕೊಂಡಿದ್ದರು. ಪ್ರಕಾಶ ಉಗಲಾಟದ ಸರ್ವರನ್ನು ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಚಂದ್ರು ಸುರಕೋಡ, ವಿಶ್ವನಾಥ ಯಳಮಲಿ, ಉಮೇಶ ನಾಲ್ವಾಡ, ಸುರೇಶ ರಡ್ಡೇರ, ಮಹಾಂತೇಶ ಪಾಟೀಲ, ಸಿದ್ಧಣ್ಣ ಮುನವಳ್ಳಿ, ರಾಜು ಮಲ್ಲಾಡದ ಅರವಿಂದ ಕಾಮತ, ಬಾಪುಗೌಡ ಸಂಕನಗೌಡ, ವಿಜಯ ಶಿವಪ್ಪಗೌಡ್ರ, ವಿಜಯ ಗೊಡಚಿ, ವಿರುಪಾಕ್ಷಯ್ಯ ಹಿರೇಮಠ, ರೇಣುಕಾಪ್ರಸಾದ ಹಿರೇಮಠ, ಮೌಲಾಲಿ ಮುಲ್ಲಾನವರ, ಬಾಬುಗೌಡ ಬಾಪುಗೌಡ್ರ, ಮುಂತಾದವರು ಉಪಸ್ಥಿತರಿದ್ದರು.