ದೇಶ ಮರೆಯದ ಕರಾಳ ದಿನದ ನೆನಪು

0
Honorable to Krishna P. Hombali from BJP Gadag Zilla Nagar Mandal
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಹಾಗೂ ನಗರ ಮಂಡಲ ವತಿಯಿಂದ 50 ವರ್ಷಗಳ ಹಿಂದೆ ಘೋಷಣೆಯಾಗಿದ್ದ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾದ ಕೃಷ್ಣಾ ಪಿ.ಹೊಂಬಾಳಿಯವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವಿಸಿ ಕರಾಳ ದಿನವನ್ನು ನೆನಪಿಸುವ ಕಾರ್ಯವನ್ನು ಮಾಡಿದರು.

Advertisement

ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನದ ನೆನಪುಗಳನ್ನು ಪ್ರಮುಖರಾದ ನಾಗರಾಜ ಕುಲಕರ್ಣಿ, ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ ಅವರು ಕೃಷ್ಣಾ ಹೊಂಬಾಳಿಯವರ ಅಂದಿನ ದಿನಗಳನ್ನ ಎಳೆ ಎಳೆಯಾಗಿ ತಿಳಿಸಿಕೊಟ್ಟರು.

ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ಕರಾಳ ದಿನವನ್ನು ಬಿಜೆಪಿ ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ ನಮ್ಮ ಜಿಲ್ಲೆಯ 9 ಮಂಡಲಗಳಲ್ಲಿ ಅಂದಿನ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾದ ವ್ಯಕ್ತಿಗಳ ಮನೆಗೆ ತೆರಳಿ ಅವರನ್ನು ಗೌರವಿಸುವುದರ ಮೂಲಕ ಅವರ ಅನುಭವವನ್ನು ನಮ್ಮೆಲ್ಲ ಬಿಜೆಪಿ ಕಾರ್ಯಕರ್ತರಿಗೆ ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಜಿಲ್ಲಾಧ್ಯಕ್ಷರು ಗದಗ ನಗರದ ಕೃಷ್ಣಾ ಹೊಂಬಾಳಿರವರ ಮನೆಯಲ್ಲಿ ಅವರನ್ನು ಗದಗ ನಗರ ಮಂಡಲ ಬಿಜೆಪಿ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರೊಂದಿಗೆ ಅವರ ಅನುಭವವನ್ನು ಹಂಚಿಕೊಂಡು ಈ ದಿನವನ್ನು ಭಾರತದಲ್ಲಿ ಎಂದಿಗೂ ಮರೆಯಲಾಗದದಿನವೆಂದರು.

ಈ ಸಂದರ್ಭದಲ್ಲಿ ನಗರದ ಅಧ್ಯಕ್ಷರಾದ ಅನಿಲ ಅಬ್ಬಿಗೇರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ನಗರಸಭಾ ಸದಸ್ಯ ಮುತ್ತು ಮುಶಿಗೇರಿ, ಶಂಕರ ಕಾಕಿ, ಅಶೋಕ ಸಂಕಣ್ಣವರ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ವೆಂಕಟೇಶ ಹಬೀಬ, ಬಸವರಾಜ ಶಿರಿ, ದೇವಪ್ಪ ಗೊಟೂರ, ಸುರೇಶ ಚಿತ್ತರಗಿ, ಮಹೇಶ ಕೋಟಿ, ಶೈಲೇಶ ಬಾಗಮರ, ಕಮಲೇಶ ಜೈನ್, ಅಶ್ವಿನಿ ಜಗತಾಪ್, ವಿಜಯಲಕ್ಷ್ಮಿ ಮಾನ್ವಿ, ಪದ್ಮೀನಿ ಮುತ್ತಲದಿನ್ನಿ, ರತ್ನಾ ಕುರಗೋಡ, ಜಯಶ್ರೀ ಅಣ್ಣಿಗೇರಿ, ಶೃತಿ ಮುಶಿಗೇರಿ, ಮಾಂತೇಶ ಬಾತಾಖಾನಿ, ಮಂಜುನಾಥ ಶಾಂತಗೇರಿ, ರಾಜು ಉಮಚಗಿ, ಶಶಿಧರ, ಅವಿನಾಶ ಹೊನಗುಡಿ, ವಿನೋದ ಹಂಸನೂರ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here