ವಿಜಯಸಾಕ್ಷಿ ಸುದ್ದಿ, ಗದಗ : ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಆರೋಗ್ಯ ತಪಾಸಣೆಯಂಥಹ ಸಾಮಾಜಿಕ ಕಾರ್ಯಕ್ರಮಗಳನ್ನು ಸತತವಾಗಿ ಹಮ್ಮಿಕೊಳ್ಳುತ್ತಿರುವ ಗಜಾನನ ಯುವಕ ಮಂಡಳಿಯ ಸಾಮಾಜಿಕ ಕಾರ್ಯಗಳು ಶ್ಲಾಘನೀಯ ಎಂದು ನಗರದ ಪೊಲೀಸ್ ಠಾಣೆಯ ಸಿಪಿಐ ಬಿ.ಡಿ. ಪಾಟೀಲ ನುಡಿದರು.
ಅವರು ಇತ್ತೀಚೆಗೆ ನಗರದ ಕಿಲ್ಲಾ ಚಂದ್ರಸಾಲಿ ಗಜಾನ ಯುವಕ ಮಂಡಳ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಿಲ್ಲಾ ಓಣಿಯ ಯುವಕರು ಹಾಗೂ ಹಿರಿಯರು ಕೂಡಿಕೊಂಡು ಸಂಘಟನಾ ಮನೋಭಾವದಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನೆರವೇರಿಸುತ್ತಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ವಾರ್ಡ್ನ ನಗರಸಭೆ ಸದಸ್ಯರಾದ ಶೈಲಾ ಬಾಕಳೆ, ಗಜಾನನ ಸಮಿತಿ ಅಧ್ಯಕ್ಷ ಶ್ರೀಕಾಂತ್ ಪವಾರ್, ಉಪಾಧ್ಯಕ್ಷ ಸುಧೀರ ಕಾಟೀಗಾರ, ಕಾರ್ಯದರ್ಶ ರವಿ ಚವಾಣ್, ಹಿರಿಯರಾದ ಪರಶುರಾಮಸಾ ಬದಿ, ಕೃಷ್ಣಾಸಾ ಲದ್ವಾ, ಪರಶುರಾಮ ಮಿಸ್ಕಿನ್, ದತ್ತುಸಾ ಬೇರವಿನಟ್ಟಿ, ಮನೋಹನ ದಲಬಂಜನ, ನರಸಿಂಹ ಖೋಡೆ, ಪ್ರಕಾಶ ಕಾಟಿಗಾರ, ಬಾಬು ಕಾಟಿಗಾರ, ವಸಂತ ಬಾಕಳೆ, ರಾಜೇಶ ಖೋಡೆ, ಚೇತನ ಲದ್ವಾ, ಮಹಿಳಾ ಮಂಡಳಿಯ ಸರೋಜಿಬಾಯಿ ಶೇಜ್ವಡ್ಕರ್, ಮಾಲಾ ಬದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ರಾಜೇಶ ಖೋಡೆ ಕಾರ್ಯಕ್ರಮ ನಿರೂಪಿಸಿದರು.