ವಿಜಯಸಾಕ್ಷಿ ಸುದ್ದಿ, ಗದಗ : ರೋಟರಿ ಗದಗ ಸೆಂಟ್ರಲ್ ವತಿಯಿಂದ 2023-24ನೇ ಸಾಲಿನಲ್ಲಿ ಬಡಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು, ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ, ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಅನೇಕ ಉಚಿತ ತರಬೇತಿಗಳನ್ನು, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಮೇಳ ಹೀಗೆ ಅನೇಕ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುವುದರ ಮೂಲಕ ಸಮಾಜ ಸೇವೆಯನ್ನು ಮಾಡಿದ ರೋಟರಿ ಗದಗ ಸೆಂಟ್ರಲ್‌ನ ಮಾಜಿ ಅಧ್ಯಕ್ಷ ವಿಜಯಕುಮಾರ್ ಹಿರೇಮಠ, ಕಾರ್ಯದರ್ಶಿ ಡಾ. ಸಂತೋಷ ತೋಟಗಂಟಿಮಠ, ಕೋಶಾಧ್ಯಕ್ಷ ಸುನಿಲ್ ಕಬಾಡಿ ದಂಪತಿಗಳಿಗೆ ನಟರಂಗ ಸಂಸ್ಥೆಯ ಪರವಾಗಿ ಅಧ್ಯಕ್ಷರಾದ ಸೋಮಶೇಖರ್ ಚಿಕ್ಕಮಠ ಅವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರೋಟರಿ ಗದಗ ಸೆಂಟ್ರಲ್‌ನ ನೂತನ ಅಧ್ಯಕ್ಷ ರಾಮನಗೌಡ ದಾನಪ್ಪಗೌಡರ್ ದಂಪತಿಗಳು, ಹಿರಿಯರಾದ ಪಿ.ಸಿ. ಹಿರೇಮಠ್, ಅಪ್ಪುರಾಜ್ ಭದ್ರಕಾಳಮ್ಮನಮಠ, ಸಂಜಯ್ ಸಿಂದಿಗೇರಿ, ಎಂ.ಜಿ. ಹೂಗಾರ ಮುಂತಾದವರು ಉಪಸ್ಥಿತರಿದ್ದರು.