ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ವಿವಿಧ ಶಾಲಾ ಕಾಲೇಜು, ಸಂಘ-ಸಂಸ್ಥೆಗಳು ಹಾಗೂ ಅಂಗವಾಡಿ ಕೇಂದ್ರಗಳಲ್ಲಿ ೭೯ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮ ಪಂಚಾಯಿತಿಯಲ್ಲಿ ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ನೆರವೇರಿಸಿದರು. ಪ್ರಾಥಮಿಕ, ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ದೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾ.ಪಂ ಸರ್ವ ಸದಸ್ಯರು ಹಾಜರಿದ್ದರು. ಪಿ.ಡಿ.ಒ ಅಮೀರನಾಯಕ ಸ್ವಾಗತಿಸಿ ನಿರೂಪಿಸಿದರು.
ಬಾಲಕಿಯರ ಸರಕಾರಿ ಪ್ರೌಢಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ರಮಜಾನಸಾಬ ತಹಸೀಲ್ದಾರ ನೆರವೇರಿಸಿದರು. ಪ್ರತಿಭಾವಂತ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಶಿಷ್ಯ ವೇತನ ನೀಡಿದರು. ಸದಸ್ಯರು, ಶಿಕ್ಷಕರು ಹಾಜರಿದ್ದರು.
ಸರಕಾರಿ ಮಾದರಿಯ ದ್ವಿಭಾಷಾ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಗವಿಶಿದ್ದಪ್ಪ ಯಲಿಶಿರುಂದ ನೆರವೇರಿಸಿದರು.
ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಹಿರಿಯ ಶಿಕ್ಷಕಿ ಪ್ರಮೀಳಾ ಅಂಗಡಿ ನೆರವೇರಿಸಿದರು. ಸ್ತ್ರೀರೋಗ ವೈದ್ಯೆ ವೈಶಾಲಿ ಬಿರಾದಾರ ಸೇರಿದಂತೆ ಶಿಕ್ಷಕ ಬಳಗದವರು ಹಾಜರಿದ್ದರು.
ಸರಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅದ್ಯಕ್ಷ ನಾಗರಾಜ ಖಂಡು ನೆರವೇರಿಸಿದರು. ಗ್ರಾ.ಪಂ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕ ಬಳಗದವರು ಹಾಜರಿದ್ದರು.
ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ೧ರ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ನಿಂಗಪ್ಪ ಗಡಗಿ ನೆರವೇರಿಸಿದರು. ನಿರ್ದೇಶಕರು, ಶಿಕ್ಷಕರು ಹಾಜರಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಹ್ಮದರಪೀಕ ಹುಬ್ಬಳ್ಳಿ ನೆರವೇರಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.೩ರ ಧ್ವಜಾರೋಹಣವನ್ನು ಅಧ್ಯಕ್ಷ ಕಳಕಪ್ಪ ಟೆಂಗಿನಕಾಯಿ ನೆರವೇರಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.೨ರ ಧ್ವಜಾರೋಹಣವನ್ನು ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ ನೆರವೇರಿಸಿದರು. ನಿರ್ದೇಶಕರಾದ ಮಲ್ಲನಗೌಡ ಪಾಟೀಲ, ಗವಿಶಿದ್ದಪ್ಪ ರೇವಡಿ, ಕಲ್ಲಪ್ಪ ಬೆಟಗೇರಿ, ಶಂಕ್ರಪ್ಪ ಕುಂಬಾರ, ಅಂದಾನಯ್ಯ ಪತ್ರಿಮಠ, ಫಕ್ಕೀರಯ್ಯ ಪತ್ರಿಮಠ, ಅನ್ನಪೂರ್ಣ ಹಡಗಲಿ, ನೀಲವ್ವ ರವದಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ. ಬೆಣಕಲ್ಲ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮರಿಯಪ್ಪ ವಡ್ಡರ ನೆರವೇರಿಸಿದರು. ಪ್ರಧಾನ ಗುರುಗಳು, ಸಹ ಶಿಕ್ಷಕರು, ಸದಸ್ಯರು ಹಾಜರಿದ್ದರು. ಅಂಬೇಡ್ಕರ ನಗರದ ಧ್ವಜಾರೋಹಣವನ್ನು ಭೀಮಪ್ಪ ಪೂಜಾರ ನೆರವೇರಿಸಿದರು. ನಗರದ ಯುವಕರು, ಹಿರಿಯರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಮಾರುತಿ ನಗರದ ಬಿ.ಎಚ್. ಪಾಟೀಲ ಸಂಯುಕ್ತ ಪದವಿ ಕಾಲೇಜಿನ ಧ್ವಜಾರೋಹಣವನ್ನು ಜನತಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಕುಂಬಾರ ನೆರವೇರಿಸಿದರು. ಪ್ರಾಚಾರ್ಯ ಎಸ್.ಬಿ. ಪಾಟೀಲ, ಪ್ರೌಢಶಾಲೆಯ ಹಿರಿಯ ಶಿಕ್ಷಕ ಎ.ಎನ್. ಪೂಜಾರ, ನಿರ್ದೇಶಕ ಮಂಡಳಿಯ ಸರ್ವ ಸದಸ್ಯರು, ಶಿಕ್ಷಕ ವರ್ಗ ಹಾಜರಿದ್ದರು.
ಮಾರುತಿ ನಗರದ ಸರಕಾರಿ ಮಾದರಿಯ ದ್ವಿಭಾಷಾ ಪ್ರಾಥಮಿಕ ಶಾಲೆಯ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಗುರಿಕಾರ ನೆರವೇರಿಸಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಎಸ್.ಸಿ/ಎಸ್.ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ೩ ಸಾವಿರ ರೂ ಶಿಷ್ಯವೇತನ ನೀಡಿದರು. ಗ್ರಾ.ಪಂ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು, ಶಿಕ್ಷಕರು ಹಾಜರಿದ್ದರು.